ಬೆಳ್ತಂಗಡಿ: ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವಾಗ ವಿಷಜಂತು ಕಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ಎಂಬಲ್ಲಿ ನಡೆದಿದೆ. ಕೃಷ್ಣಪ್ಪ ಮೂಲ್ಯ (63) ಮೃತ ದುರ್ದೈವಿ. ಕೃಷ್ಣಪ್ಪ ಮೂಲ್ಯ ಅವರು ಹುತ್ತದಿಂದ ಕೈ ಹಾಕಿ ಜೇನು ತೆಗೆಯುವಾಗ ಯಾವುದೋ ವಿಷಜಂತು ಕಚ್ಚಿದೆ. ಆದರೆ ಇದಕ್ಕೆ ಇವರು ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಪರಿಣಾಮ ಮೃತಪಟ್ಟಿದ್ದಾರೆ.
ಕೃಷ್ಣಪ್ಪ ಮೂಲ್ಯರವರ ಪತ್ನಿ ಮೃತಪಟ್ಟಿದ್ದು, ಅವರ ಮಕ್ಕಳು ಸುಮಾರು 15 ವರ್ಷಗಳ ಹಿಂದೆ ಕೃಷ್ಣಪ್ಪ ಮೂಲ್ಯ ರವರನ್ನು ಬಿಟ್ಟ ಹೋಗಿದ್ದು, ತದನಂತರ ಕೃಷ್ಣಪ್ಪ ಮೂಲ್ಯ, ಎಂಬವರು ಒಬ್ಬಂಟಿಯಾಗಿ ಬಡಗಕಾರಂದೂರು ಗ್ರಾಮದ ಅರ್ಕಿಜಡ್ಡ ಎಂಬಲ್ಲಿ ವಾಸವಾಗಿದ್ದರು. ಕೃಷ್ಣಪ್ಪ ಮೂಲ್ಯ ರವರ ತಂಗಿ ಶ್ರೀಮತಿ ಮುತ್ತಮ್ಮ ಎಂಬವರು ಕೃಷ್ಣಪ್ಪ ಮೂಲ್ಯರಿಗೆ ಪ್ರತಿದಿನ ಊಟ ತಿಂಡಿ ಕೊಟ್ಟು ಬರುತ್ತಿದ್ದು, ಇತ್ತೀಚೆಗೆ ಸುಮಾರು 15 ದಿನಗಳ ಹಿಂದೆ ಕೃಷ್ಣಪ್ಪ ಮೂಲ್ಯ ರವರು ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವ ಸಮಯ ಎಡಕೈಗೆ ಏನೋ ಕಚ್ಚಿದ ಗಾಯವಾಗಿ ಕೈ ಬಾತುಕೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳಲು ನಿರಾಕರಿಸಿದ್ದು, ಅವರು ಎ.2ರಂದು ಮನೆಯಲ್ಲೇ ಮೃತಪಟ್ಟಿದ್ದಾರೆ. ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವಾಗ ಯಾವುದೋ ವಿಷಜಂತು ಹೆಚ್ಚಿರಬಹುದು ಎಂಬ ಶಂಕೆ ಉಂಟಾಗಿದೆ ಅಥವಾ ಇನ್ಯಾವುದೋ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.


