Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು

ಬೆಳ್ತಂಗಡಿ : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು

- Advertisement -
- Advertisement -

ಬೆಳ್ತಂಗಡಿ : ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿದೆ.

ಪ್ರಕರಣದ ವಿವರ: ಬದ್ಯಾರಿನ ಐ ಬಿ ರೆಸಿಡೆನ್ಸಿ ಎಂಬಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿರುವ ಇಸ್ಮಾಯಿಲ್‌ ಅವರು ದಿನಾಂಕ :06-01-2026 ರಂದು ರಾತ್ರಿ 7:00 ಗಂಟೆಗೆ ಅವರ ಪತ್ನಿ  ಮತ್ತು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಮೂಡಬಿದ್ರೆಗೆ ಕಾರ್ಯಕ್ರಮಕ್ಕೆ ಹೋದವರು ಮರಳಿ ರಾತ್ರಿ 11.50 ಗಂಟೆಗೆ  ವಾಪಾಸ್ ಮನೆಗೆ ಬಂದಿದ್ದರು. ಬಂದು ನೋಡಿದಾಗ ಯಾರೋ ಕಳ್ಳರು ಅವರು ಮನೆಯಲ್ಲಿ ಇಲ್ಲದಿರುವ ಸಮಯ ಮನೆಯ ಹಿಂಬಾಗಿಲು ಚಿಲಕ ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿದ್ದ  ಕಪಾಟಿನ ಬೀಗ ಮುರಿದು ಕಪಾಟಿನಲ್ಲಿರಿಸಿದ್ದ 1) 24 ಗ್ರಾಂ ತೂಕದ 2 ಚಿನ್ನದ ಬಳೆ 2) 20  ಗ್ರಾಂ ತೂಕದ ಚಿನ್ನದ ಮುತ್ತಿನ ಹಾರ 3) 4 ಗ್ರಾಂ ತೂಕದ ಬ್ರಾಸ್ ಲೈಟ್-1 4) ಮೂರು ಗ್ರಾಂ ತೂಕದ 2 ಉಂಗುರ 5) 1 1/2 ಗ್ರಾಂ 1 ಉಂಗುರ 6) 4 ಗ್ರಾಂ ತೂಕದ ಕಿವಿಯ ಓಲೆ  ಒಟ್ಟು 83.5 ಗ್ರಾಂ ತೂಕದ ಚಿನ್ನಭಾರಣ ಇದರ ಅಂದಾಜು ಮೌಲ್ಯ 9, 50,000/-  25,000/- ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಬೆಳ್ತಂಗಡಿ ಪೊಲೀಸ್ ಠಾಣೆ ಅಪರಾದ ಕ್ರಮಾಂಕ  02/2026 ಕಲಂ: 331(4)‌, 305 ಬಿಎನ್‌ ಎಸ್ ನಂತೆ ಪ್ರಕರಣ ದಾಖಲಾಗಿರುತ್ತೆ

- Advertisement -

Latest News

error: Content is protected !!