- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜೆ ಎಂಬಲ್ಲಿ ವಾಸವಿರುವ 7 ಕೊರಗ ಕುಟುಂಬಗಳು ಲಾಕ್ ಡೌನ್ ನಿಂದಾಗಿ ಕಳೆದ ಕೆಲವು ದಿನಗಳಿಂದ ನಿತ್ಯೋಪಯೋಗಿ ವಸ್ತುಗಳಿಲ್ಲದೆ ಕಷ್ಟ ಪಡುತಿದ್ದು ಅನಿಲ್ ಪೈ ಬಂಗಾಡಿ ಇವರ ಮನವಿ ಮೇರೆಗೆ ಉದ್ಯಮಿ ಗೋಕುಲ್ ದಾಸ್ ಭಟ್ ರವರ ಸಹಕಾರದೊಂದಿಗೆ ಈ ಕುಟುಂಬಗಳಿಗೆ ಅಕ್ಕಿ ಹಾಗೂ ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ಅವರ ಮನೆಗಳಿಗೆ ಹೋಗಿ ನೀಡಲಾಯಿತು.
ಈ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವ ವಿಚಾರ ತಿಳಿದು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುವ ಬಗ್ಗೆ ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ರೋಹಿದಾಸ್ ಪೈ , ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ. ಆಹಾರ ಸಾಮಾಗ್ರಿಗಳನ್ನು ವಿತರಿಸಲು ಸಹಕರಿಸಿದರು.
- Advertisement -