Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಗುರುವಾಯನಕೆರೆ 'ಎಕ್ಸೆಲ್' ನ ಅಕ್ರಮಗಳು ಒಂದೊಂದಾಗಿ ಬಯಲಿಗೆ

ಬೆಳ್ತಂಗಡಿ : ಗುರುವಾಯನಕೆರೆ ‘ಎಕ್ಸೆಲ್’ ನ ಅಕ್ರಮಗಳು ಒಂದೊಂದಾಗಿ ಬಯಲಿಗೆ

- Advertisement -
- Advertisement -

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಅಕ್ರಮಗಳು ಹಲವು ಸಮಯಗಳಿಂದ ಕೇಳಿಬರುತ್ತಿದ್ದು. ಅದರಲ್ಲಿಯೂ ಎಕ್ಸೆಲ್ ಎಂಬ ಶಿಕ್ಷಣ ಸಂಸ್ಥೆಯ ಅಕ್ರಮಗಳ ವಾಸನೆ ಒಂದೊಂದಾಗಿ ಹೊರಬರಲು ಆರಂಭವಾಗುತ್ತಿದೆ.

Infinity Learning Foundation (R) Ujire  ಎಂಬ ರಿಜಿಸ್ಟರ್ ಸಂಸ್ಥೆಯ ಅಡಿಯಲ್ಲಿರುವ ಅಧ್ಯಕ್ಷರಾಗಿ ಸುಮಂತ್ ಕುಮಾರ್ ಜೈನ್ ಕುಟುಂಬ ಸದಸ್ಯರು ಸೇರಿಕೊಂಡು ಮಾಡಿರುವ ‘ಎಕ್ಸೆಲ್ ‘ಎಂಬ ಶಿಕ್ಷಣ ಸಂಸ್ಥೆಯೂ ಸ್ವಯಂ ಘೋಷಿತವಾಗಿ ಕರ್ನಾಟಕದಲ್ಲಿಯೇ ಹೆಸರು ಪಡೆದುಕೊಂಡಿದೆ. ಈ ಹೆಸರು ಪಡೆಯಲು ಈ ಸಂಸ್ಥೆ ಪುಕ್ಕಟೆ ಪ್ರಚಾರ ಹಾಗೂ ನಕಲಿ ದಾಖಲೆ ಸೇರಿದಂತೆ ಇತರ ಇಲಾಖೆಗಳಿಗೂ ಕೂಡ ಮೋಸ ಮಾಡಿರುವುದು ಬೆಳಕಿಗೆ ಬರುತ್ತಿದೆ.

ನಕಲಿ ದಾಖಲೆ ಸೃಷ್ಟಿ: ‘Infinity learning Foundation(R)ujire’ ಅಡಿಯಲ್ಲಿರುವ ಎಕ್ಸೆಲ್ ಟೆಕ್ನೋ ಸ್ಕೂಲ್- 29244101388 ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ (1) ಸುಮಂತ್ ಕುಮಾರ್ ಜೈನ್ ಬಿ ಮತ್ತು ಸದಸ್ಯರುಗಳಾದ (2) ಸಹನ ಜೈನ್ ಬಿ (3) ಸತೀಶ್ ಕುಮಾರ್ ಜೈನ್ ಬಿ ಮತ್ತು (4) ಶುಭಲತಾ ರವರು ಗುರುವಾಯನಕೆರೆಯಲ್ಲಿ Pre-Primary ಯಿಂದ 10 ನೇ ತರಗತಿ ವರೆಗೆ ಶಾಲೆ ಪ್ರಾರಂಭಿಸಲು ಅನುಮತಿ ಕೋರಿ ದಿನಾಂಕ 27-06-2025 ರಂದು ಅಗತ್ಯ ದಾಖಲೆಗಳನ್ನು ಶಿಕ್ಷಣ ಇಲಾಖೆಯ ಆನ್ ಲೈನ್ ತಂತ್ರಾಂಶದಲ್ಲಿ ದೃಢೀಕರಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಆ ಪ್ರಸ್ತಾವನೆಯಲ್ಲಿ ಶಾಲಾ ಕಟ್ಟಡದ ಅಗ್ನಿ ಸುರಕ್ಷತಾ (71(51)/FSR/CC/DFO/MNG/DK/2025) ಕಂಡುಬಂದಿರುತ್ತದೆ. ಆರೋಪಿತರು ಶಾಲೆ ಪ್ರಾರಂಭಿಸಲು ಇಲಾಖೆಯಿಂದ ಅನುಮತಿ ಪಡೆಯುವರೇ ಕರ್ನಾಟಕ ರಾಜ್ಯ ಆಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸಿ ವಂಚಿಸಿರುವುದರಿಂದ  ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಮೇಲೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಶಶಿಧರ ಜಿ. ಎಸ್, ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ದ.ಕ ಮಂಗಳೂರು ಇವರು ನೀಡಿದ ದೂರಿನ ಮೇರೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.6 ರಂದು ಸಂಜೆ ನಾಲ್ಕು ಜನ ಆರೋಪಿಗಳ ವಿರುದ್ಧ BNS -2023 (u/s-318(2),336(3)337,340(2),r/w3(5)) ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಎಕ್ಸೆಲ್ ಟೆಕ್ನೋ ಸ್ಕೂಲ್ ಕಟ್ಟಡಕ್ಕೆ ಸರಿಯಾದ ದಾಖಲೆ ಇಲ್ಲ: ಎಕ್ಸೆಲ್ ಟೆಕ್ನೋ ಸ್ಕೂಲ್ ಕಟ್ಟಡದ ಸರ್ವೆ ನಂಬರ್ 13/17 ದಾಖಲೆಯಲ್ಲಿ ಇರುವುದು. ಈ ಕಟ್ಟಡ ನೆಲಮಹಡಿ ಹಾಗೂ 3 ಅಂತಸ್ತಿನ ಕಟ್ಟಡ ಕಟ್ಟಲಾಗಿದೆ. ಈ ಕಟ್ಟಡಕ್ಕೆ ಕುವೆಟ್ಟು ಗ್ರಾಮ ಪಂಚಾಯತ್ ನಿಂದ ಯಾವುದೇ ಅನುಮತಿ/ ಪರವಾನಿಗೆ ಈವರೆಗೆ ಪಡೆದುಕೊಂಡಿರುವುದಿಲ್ಲ. ವಿದ್ಯುತ್ ಇಲಾಖೆಯಿಂದ ಕೂಡ ಯಾವುದೇ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಲ್ಲದೆ. ಈ ಶಾಲೆಯನ್ನು ಕಳೆದ ಒಂದು ವರ್ಷದಿಂದ ಮಕ್ಕಳನ್ನು ಸೇರ್ಪಡೆ Pre-Primary ಯಿಂದ 10 ನೇ ತರಗತಿ ವರೆಗೆ ಶಾಲೆಯನ್ನು ಕಾರ್ಯಾಚರಿಸುತ್ತಿದ್ದಾರೆ.

13/23 ಸರ್ವೆ ನಂಬರ್ ನಕಲಿ: ಈ ಪ್ರಕರಣ ಸಂಬಂಧ ಕಾಲೇಜ್ ಆಡಳಿತ ಮಂಡಳಿ ಮಾ.7 ರಂದು ಸಂಜೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ನೀಡಿದ ಅನುಮತಿ ಪತ್ರವೊಂದನ್ನು ಬಿಡುಗಡೆ ಮಾಡಿದೆ ಅದರಲ್ಲಿ ಇನ್ಫಿನಿಟಿ ಲರ್ನಿಂಗ್ ಫೌಂಡೇಷನ್‌ (ರಿ) ಕ್ಯಾಂಪಸ್ ಇದರ ಸರ್ವೆ ನಂಬರ್ 13/23 ನಲ್ಲಿ 17 ಮೀಟರ್ ಇರುವ ಎತ್ತರದ ತಳಹಂತ ಮತ್ತು 4 ಮೇಲಂತಸ್ತು ಹೊಂದಿರುವ  ಎಕ್ಸೆಲ್ ಪ್ರೀ ಯೂನಿವರ್ಸಿಟಿ ಕಾಲೇಜಿನ ಶೈಕ್ಷಣಿಕ ಕಟ್ಟಡ ಎಂದು ನಮೂದಿಸಲಾಗಿದೆ. ಆದ್ರೆ ಈ 13/23 ಸರ್ವೆ ನಂಬರ್ ನಲ್ಲಿ ಎಕ್ಸೆಲ್ ಸಂಸ್ಥೆಗೆ ಅಥವಾ ಇನ್ನಿತರ ಯಾರ ಹೆಸರಿನಲ್ಲಿಯೂ ದಾಖಲಾಗಿರುವ ಆರ್.ಟಿ.ಸಿ ಸರಕಾರದ ಅಧಿಕೃತ ದಾಖಲೆಯಲ್ಲಿ ಲಭ್ಯವಿಲ್ಲ. ಈ ಎಕ್ಸೆಲ್ ಟೆಕ್ನೋ ಸ್ಕೂಲ್ ಇರುವ ಕಟ್ಟಡದ ಸರ್ವೆ ನಂಬರ್ ನಿಜವಾಗಿಯೂ 13/17 ಆಗಿರುತ್ತದೆ.

ಭೂಮಿ ದಾಖಲೆ: ಎಕ್ಸೆಲ್ ಶಿಕ್ಷಣ ಸಂಸ್ಥೆಗೆ ಅಧಿಕೃತ 13/2,13/3,13/9,13/16,13/17,117,168/2,168/3 ಈ ಸರ್ವೆ ನಂಬರ್ ನಲ್ಲಿ ಮಾತ್ರ ಇರುವುದು. ಇದರಲ್ಲಿ 117 ಸರ್ವೆ ನಂಬರ್ ನಲ್ಲಿ ರೋಡ್ ಮಾರ್ಜಿನ್ ನಲ್ಲಿ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ಕಟ್ಟಿರುವ ವಿರುದ್ಧ 27/12/2025 ರಂದು ಕುವೆಟ್ಟು ಗ್ರಾಮ ಪಂಚಾಯತ್ ಟೇಪ್ ಹಾಕಿ ಎಚ್ಚರಿಕೆ ಬ್ಯಾನರ್ ಹಾಕಿ ಇದೀಗ ಕಾನೂನು ಹೋರಾಟದಲ್ಲಿದೆ. ಆದ್ರೂ ಇದಕ್ಕೆ ಕಳೆದ ತಿಂಗಳು ಮೂಡಾದಿಂದ ಭೂ ಪರಿವರ್ತನೆಯನ್ನು ಶಿಕ್ಷಣ ಸಂಸ್ಥೆ ಮಾಡಿಸಿಕೊಂಡಿದೆ.

ನಕಲಿ ದಾಖಲೆಗಳ ಮೂಲಕ ಜನರ ದಾರಿ ತಪ್ಪಿಸುವ ಶಿಕ್ಷಣ ಸಂಸ್ಥೆ: ನಕಲಿ ದಾಖಲೆ ಸೃಷ್ಟಿ ಮಾಡಿ ಶಿಕ್ಷಣ ಇಲಾಖೆಗೆ ವಂಚನೆ ಮಾಡಿ ಪ್ರಕರಣ ದಾಖಲಾದ ಬಳಿಕ ಕೆಲ ಲೋಕಲ್ ಪತ್ರಿಕೆಗಳಲ್ಲಿ ಇಲ್ಲದ ಸರ್ವೆ ನಂಬರ್ ಇರುವ ಅಗ್ನಿಶಾಮಕ ಇಲಾಖೆಯ ಪತ್ರವನ್ನು ನೀಡಿ ‘ಈ ಕುರಿತು ಯಾವುದೇ ಗಾಳಿ ಸುದ್ದಿಗಳಿಗೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಹೆತ್ತವರು ವಿಚಲಿತರಾಗಬಾರದು. ಎಕ್ಸೆಲ್ ವಿದ್ಯಾ ಸಂಸ್ಥೆಗಳಲ್ಲಿ ಯಾವತ್ತೂ ವಿದ್ಯಾರ್ಥಿಗಳ ಕ್ಷೇಮಪಾಲನೆಗೆ ಹಾಗೂ ಇಲಾಖಾ ನಿಯಮವಗಳಿಗೆ  ಅಗ್ರ ಪ್ರಾಶಸ್ತ್ಯ ನೀಡಲಾಗುತ್ತದೆ’ ಎಂಬ ಟ್ಯಾಗ್ ಲೈನ್ ಮೂಲಕ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಸುಳ್ಳು ಮಾಹಿತಿ ನೀಡಿ ನಂಬುವಂತೆ ಸುದ್ದಿ ಹಬ್ಬಿಸುವ ಕೆಲಸವನ್ನು ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಮಾಡುತ್ತಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಹಲವು ಅಕ್ರಮ: ಈ ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ ಹಲವು ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು. ಈ ಬಗ್ಗೆ ಸಾರ್ವಜನಿಕರು ವಿವಿಧ ಇಲಾಖೆಗಳಿಂದ ದಾಖಲೆಗಳನ್ನು ಸಂಗ್ರಹಿಸಿ ದೂರು ಹಾಗೂ ಹೈ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಈ ಹಿಂದೆ ಹೋರಾಟಗಾರೊಬ್ಬರು ಪರಂಬೋಕು ಜಾಗವನ್ನು ಈ ಶಿಕ್ಷಣ ಸಂಸ್ಥೆ ನುಂಗಿರುವ ಬಗ್ಗೆ ಹೈಕೋರ್ಟ್ ನಲ್ಲಿ ಎರಡು ವರ್ಷದ ಹಿಂದೆ ಪ್ರಕರಣ ದಾಖಲಿಸಿದ್ದು ತನಿಖೆಯಲ್ಲಿದೆ. ಇದರಿಂದ ಈ ಶಿಕ್ಷಣ ಸಂಸ್ಥೆಯ ಬೃಹತ್ ಅಕ್ರಮಗಳು ಇನ್ನಷ್ಟು ಹೊರಬರಲಿದೆ.

- Advertisement -

Latest News

error: Content is protected !!