Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ದೂರುದಾರ ಆತ್ಮಹತ್ಯೆಗೆ ಯತ್ನ

ಬೆಳ್ತಂಗಡಿ : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ದೂರುದಾರ ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಬೆಳ್ತಂಗಡಿ : ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ಮರುತನಿಖೆ ಎಸ್ಐಟಿ ಅಧಿಕಾರಿಗಳು ನಡೆಸುತ್ತಿರುವ ಬೆನ್ನಲ್ಲೇ ದೂರುದಾರ ಫಾರ್ಮ್ ಹೌಸ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ ನಲ್ಲಿ 18-12-2022 ರಂದು ಶ್ರೀಧರ(30) ಕೊಲೆ ಪ್ರಕರಣದಲ್ಲಿ ದೂರುದಾರನಾಗಿರುವ ಹರೀಶ್.ಬಿ.ಮುಗೇರ ಮಾ.11 ರಂದು ರಾತ್ರಿ 9:45 ಕ್ಕೆ ಶಿಬಾಜೆಯ ಸಾರಾ ಫಾರ್ಮ್ ತೋಟದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಎಸ್ಐಟಿ ಅಧಿಕಾರಿಗಳು ಮಾ.3 ರಂದು ವಿಚಾರಣೆ ಗಾಗಿ ನೋಟಿಸ್ ನೀಡಿ ಕರೆದು ಬಳಿಕ ಶ್ರೀಧರ ಕೊಲೆ ಪ್ರಕರಣದ ಬಗ್ಗೆ  ವಿಚಾರಣೆ ನಡೆಸಿದ್ದರು. ಆತ್ಮಹತ್ಯೆಗೆ ಯತ್ನ ಯಾವ ಕಾರಣಕ್ಕಾಗಿ ಎಂದು ನಿಖರವಾಗಿ ತಿಳಿದುಬಂದಿಲ್ಲ.

- Advertisement -

Latest News

error: Content is protected !!