Saturday, June 6, 2026
Homeಕರಾವಳಿಬೆಳ್ತಂಗಡಿ: ಚರ್ಚ್ ಕ್ರಾಸ್ ಬಳಿ ಬಾವಿಯಲ್ಲಿ ಆಟೋ ವರ್ಕ್ಸ್‌ನ ಮಾಲಕನ ಮೃತದೇಹ ಪತ್ತೆ

ಬೆಳ್ತಂಗಡಿ: ಚರ್ಚ್ ಕ್ರಾಸ್ ಬಳಿ ಬಾವಿಯಲ್ಲಿ ಆಟೋ ವರ್ಕ್ಸ್‌ನ ಮಾಲಕನ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ: ಬಾವಿಯೊಂದರಲ್ಲಿ ಉದ್ಯಮಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಇಲ್ಲಿಯ ಚರ್ಚ್ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಚರ್ಚ್ ಕ್ರಾಸ್ ಬಳಿ ವೆಲಂಕಣಿ ಆಟೋ ವರ್ಕ್ಸ್‌ನ ಮಾಲಕ ಮ್ಯಾಕ್ಸಿಮ್ ಮಾಡ್ತಾ (55.ವ) ಎಂದು ಗುರುತಿಸಲಾಗಿದೆ. ಮ್ಯಾಕ್ಸಿಮ್ ಮಾಡ್ತಾರ ಮೃತದೇಹ ಅವರ ಪಕ್ಕದ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

ಗ್ಯಾರೇಜ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮ್ಯಾಕ್ಸಿಮ್ ಮಾಡ್ತಾ ರವರು ಪ್ರತೀ ದಿನ ಮುಂಜಾವ 5 ಗಂಟೆಗೆ ವಾಕಿಂಗ್ ಹೋಗುತ್ತಿದ್ದು, ಇಂದು ಮುಂಜಾನೆ ಮನೆಯಿಂದ ಹೊರಟವರು ಮರಳಿ ಮನೆಗೆ ವಾಪಸಾಗದ ಕಾರಣ ಮನೆ ಮಂದಿ ಹುಡುಕಾಟ ನಡೆಸಿದ್ದು, ಪಕ್ಕದ ಮನೆಯವರ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.

ಪಕ್ಕದ ಮನೆಯವರು ಮನೆಯಲ್ಲಿ ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು, ಘಟನೆಗೆ ಸೂಕ್ತ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ ನಂದ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ತಾಯಿ, ಪತ್ನಿ ಶಿಕ್ಷಕಿಯಾದ ಬೆನೆಡಿಕ್ಟ್, ಪುತ್ರ, ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

- Advertisement -

Latest News

error: Content is protected !!