Friday, June 5, 2026
Homeಕರಾವಳಿಬೆಳ್ತಂಗಡಿ : ಬೈಕಿಗೆ ಪಿಕಪ್ ಡಿಕ್ಕಿ ಹೊಡೆದು ಸವಾರ ಸಾವು ಪ್ರಕರಣ:ಗಾಯಗೊಂಡಿದ್ದ ಸಹಸವಾರ ಚಿಕಿತ್ಸೆ ಫಲಿಸದೆ...

ಬೆಳ್ತಂಗಡಿ : ಬೈಕಿಗೆ ಪಿಕಪ್ ಡಿಕ್ಕಿ ಹೊಡೆದು ಸವಾರ ಸಾವು ಪ್ರಕರಣ:ಗಾಯಗೊಂಡಿದ್ದ ಸಹಸವಾರ ಚಿಕಿತ್ಸೆ ಫಲಿಸದೆ ಸಾವು

- Advertisement -
- Advertisement -

ಬೆಳ್ತಂಗಡಿ: ಹಳೇಕೋಟೆ ಬಳಿ ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಾ.25 ರಂದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದ ಸಹಸವಾರ ಕೂಡ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದಾನೆ.

ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿಯತ್ತ ಹೋಗುತಿದ್ದ ದ್ವಿಚಕ್ರ ವಾಹನಕ್ಕೆ ಮಾ.25 ರಂದು ಎದುರಿನಿಂದ ಬರುತಿದ್ದ  ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿ ಚಕ್ರ ವಾಹನ ಮಗುಚಿ ಬಿದ್ದು ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟು ಸವಾರ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರಾಘವೇಂದ್ರ ನಗರ್ ನಿವಾಸಿ ದಿ.ಜಯರಾಮ್ ಮತ್ತು ಜಯಂತಿ ದಂಪತಿಗಳ ಎರಡನೇ ಮಗ ಪುರುಷೋತ್ತಮ (19)  ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಸಹಸವಾರ ಲಾಯಿಲ ಗ್ರಾಮದ ರಾಘವೇಂದ್ರ ನಗರದ ತೌಶೀಫ್ ಮಗ ತೌಫೀಕ್(17)  ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಮಾ.26 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಅಪಘಾತ ಬಳಿಕ ಉಜಿರೆಯ ಪಿಕಪ್ KA-19-AE-3490 ವಾಹನ ಸಮೇತ ಪರಾರಿಯಾಗಿದ್ದು. ಬಳಿಕ ಸಂಜೆ ವೇಳೆ ಸಂಚಾರಿ ಪೊಲೀಸ್ ಠಾಣೆಗೆ ವಾಹನವನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!