- Advertisement -
- Advertisement -
ಬೆಳ್ತಂಗಡಿ : ಅರಣ್ಯ ಇಲಾಖೆಯ ಆರ್.ಎಫ್.ಓ ಅಗಿದ್ದ ಪ್ರಸ್ತುತ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಆಗಿರುವ ಮೋಹನ್ ಕುಮಾರ್.ಬಿ.ಜಿ ಅವರಿಗೆ ಎಸಿಎಫ್ ಆಗಿ ಆ.7 ರಂದು ರಾಜ್ಯ ಸರಕಾರ ಮುಂಬಡ್ತಿ ನೀಡಿ ಬಾಳೆ ಹೊನ್ನೂರು ಉಪವಿಭಾಗ, ಕೊಪ್ಪ ವಿಭಾಗದ ಎ.ಸಿ.ಎಫ್ ಆಗಿ ವರ್ಗಾವಣೆ ಮಾಡಿದೆ.
ಮೋಹನ್ ಕುಮಾರ್.ಬಿ.ಜಿ 2001 ರಲ್ಲಿ ಡಿ.ಆರ್.ಎಫ್.ಓ ಆಗಿ ಸೇವೆಗೆ ಸೇರಿದ್ದು, 2011 ರಲ್ಲಿ ಆರ್.ಎಫ್.ಓ ಆಗಿ ಮುಂಬಡ್ತಿ ಹೊಂದಿದ್ದು ಇದೀಗ 2024 ರಲ್ಲಿ ಎಸಿಎಫ್ ಅಗಿ ಮುಂಬಡ್ತಿ ಹೊಂದಿದ್ದಾರೆ. ಮೂಡಿಗೆರೆ, ಪುತ್ತೂರು, ಶಿವಮೊಗ್ಗ, ಕೊಪ್ಪ, ಬೆಳ್ತಂಗಡಿ ಯಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಓ ಕರ್ತವ್ಯದ ವೇಳೆ ಹಲವು ಅಕ್ರಮ ಮರ ಪ್ರಕರಣ , ಕಾಡು ಪ್ರಾಣಿಗಳ ಬೇಟೆ ಪ್ರಕರಣವನ್ನು ಪತ್ತೆ ಹಚ್ಚಿ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಹಾಗೂ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
- Advertisement -