Sunday, May 12, 2024
Homeಕರಾವಳಿಬೆಳ್ತಂಗಡಿ : ಅಕ್ರಮ ಆಸ್ತಿಗಳಿಕೆ ಆರೋಪ;  ಪೊಲೀಸ್ ಅಧಿಕಾರಿ ಗಂಗೀರೆಡ್ಡಿ ಖುಲಾಸೆ

ಬೆಳ್ತಂಗಡಿ : ಅಕ್ರಮ ಆಸ್ತಿಗಳಿಕೆ ಆರೋಪ;  ಪೊಲೀಸ್ ಅಧಿಕಾರಿ ಗಂಗೀರೆಡ್ಡಿ ಖುಲಾಸೆ

spot_img
- Advertisement -
- Advertisement -

ಬೆಳ್ತಂಗಡಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಗೊಳಿಸಿ ಆದೇಶ ಹೊರಡಿಸಿದೆ.

ಬೆಳ್ತಂಗಡಿಯ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಗಂಗೀರೆಡ್ಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ 2009ರಲ್ಲಿ ಆ.27ರಂದು ಆಗಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್ ನೇತೃತ್ವದ ತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿತ್ತು.

ಲೋಕಾಯುಕ್ತ ಡಿವೈಎಸ್ಪಿ ಎಂ. ವಿಠಲ್ ದಾಸ್ ಪೈ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರಲ್ಲದೆ ಇನ್ಸ್‌ಪೆಕ್ಟರ್ ಗಂಗೀರೆಡ್ಡಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


4 ವರ್ಷ ಸಾದಾ ಶಿಕ್ಷೆ;
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯವು 2020ರಲ್ಲಿ ಗಂಗೀರೆಡ್ಡಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ 4 ವರ್ಷ ಸಾದಾ ಶಿಕ್ಷೆ ವಿಧಿಸಿತ್ತು.

ಸಜೆ ಮತ್ತು 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿತ್ತು.
ಕರಾವಳಿ ಕಾವಲು ಪಡೆಯ (ಸಿಎಸ್‌ಪಿ) ಇನ್ಸ್ಪೆಕ್ಟರ್ ಆಗಿದ್ದ ಗಂಗೀರೆಡ್ಡಿ ಇದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕೃಷಿ ಆದಾಯ, ಊರಿನಲ್ಲಿರುವ ಕಟ್ಟಡಗಳ ಬಾಡಿಗೆ, ಕುಟುಂಬದ ಆದಾಯದಲ್ಲಿ ದೊರೆತ ಚಿನ್ನ ಮಾರಾಟದ ಹಣದ ಲೆಕ್ಕಾಚಾರವನ್ನು ತನಿಖೆ ವೇಳೆ ಪರಿಗಣಿಸಿರಲಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಹೈಕೋರ್ಟ್‌ ಶಿಕ್ಷೆಯನ್ನು ರದ್ದುಗೊಳಿಸಿದೆ.
ಗಂಗೀರೆಡ್ಡಿಯ ಪರವಾಗಿ ನ್ಯಾಯವಾದಿಗಳಾದ ಪರಮೇಶ್ವರ ಎನ್‌.ಹೆಗ್ಡೆ, ಜಿನೇಂದ್ರ ವಾದ ಮಂಡಿಸಿದ್ದರು.

- Advertisement -
spot_img

Latest News

error: Content is protected !!