Wednesday, June 24, 2026
Homeಕರಾವಳಿಬೆಳ್ತಂಗಡಿ ಮಾರಿಗುಡಿಯ ಅರ್ಚಕ ಯುವರಾಜ ಹೆಗ್ಡೆ ನಿಧನ

ಬೆಳ್ತಂಗಡಿ ಮಾರಿಗುಡಿಯ ಅರ್ಚಕ ಯುವರಾಜ ಹೆಗ್ಡೆ ನಿಧನ

- Advertisement -
- Advertisement -

ಬೆಳ್ತಂಗಡಿ: ಕಳೆದ ಹಲವಾರು ವರುಷಗಳಿಂದ ಬೆಳ್ತಂಗಡಿ ಮಾರಿಗುಡಿಯಲ್ಲಿ ಅನುವಂಶೀಯ ಪ್ರಧಾನ ಅರ್ಚಕರಾಗಿ ಪೂಜೆ ಮಾಡುತಿದ್ದ ಅಲ್ಲಾಟಬೈಲು ಯುವರಾಜ ಹೆಗ್ಡೆ ಅಲ್ಪಕಾಲದ ಅಸೌಖ್ಯದಿಂದ ನ 23 ರಂದು ಸಂಜೆ ನಿಧನ ಹೊಂದಿದ್ದಾರೆ.

ದೇವಸ್ಥಾನಕ್ಕೆ ಬರುವಭಕ್ತಾಭಿಮಾನಿಗಳಲ್ಲಿ ಸದಾ ನಗು ನಗುತ್ತಾ ಮಾತನಾಡುತಿದ್ದ ಇವರು ಪತ್ನಿ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನ 24 ರ ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಅಲ್ಲಾಟ ಮನೆಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Latest News

error: Content is protected !!