Sunday, May 5, 2024
Homeಕರಾವಳಿಬಂಗಾರಪಲ್ಕೆ ಫಾಲ್ಸ್‌ ದುರಂತ: 11ನೇ ದಿನದ ಶೋಧ ಕಾರ್ಯವೂ ವಿಫ‌ಲ, ಸ್ನೇಹಿತರ ಬಗ್ಗೆ ಹೆಚ್ಚಿದ ಅನುಮಾನ

ಬಂಗಾರಪಲ್ಕೆ ಫಾಲ್ಸ್‌ ದುರಂತ: 11ನೇ ದಿನದ ಶೋಧ ಕಾರ್ಯವೂ ವಿಫ‌ಲ, ಸ್ನೇಹಿತರ ಬಗ್ಗೆ ಹೆಚ್ಚಿದ ಅನುಮಾನ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ. 25ರಂದು ಗುಡ್ಡ ಕುಸಿತಗೊಂಡು ಮಣ್ಣಿನಡಿ ಸಿಲುಕಿದ ಕಾಲೇಜು ವಿದ್ಯಾರ್ಥಿಯ ದೇಹಕ್ಕಾಗಿ ನಡೆಸುತ್ತಿರುವ ಶೋಧ ಕಾರ್ಯ ಹನ್ನೊಂದನೇ ದಿನವೂ ಪೂರ್ಣಗೊಂಡಿದ್ದು ಯಾವುದೇ ಕುರುಹು ಲಭ್ಯವಾಗಿಲ್ಲ.

ಉಜಿರೆಯ ಕಾಶಿಬೆಟ್ಟು ನಿವಾಸಿ ಮತ್ತು ಎಸ್.ಡಿ .ಎಂ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸನತ್ ಶೆಟ್ಟಿ (20)ಯವರ ಹುಡುಕಾಟ ಕಾರ್ಯಾಚರಣೆ ವಿರಾಮವಿಲ್ಲದೆ ನಡೆಯುತ್ತಿದ್ದರೂ ಮಗನ ಪತ್ತೆಯಾಗದಿರುವುದು ಹೆತ್ತವರ ಆಂಕ್ರಂದನವನ್ನು ಹೆಚ್ಚಿಸಿದೆ.

ಮೊದಲ ದಿನದಿಂದಲೂ ಕಲ್ಲು ಬಂಡೆಗಳನ್ನು ಹೊಡೆದು ತೆರವುಗೊಳಿಸುವ ಪ್ರಕ್ರಿಯೆ ಶುರುವಾಗಿದ್ದು, ನಿನ್ನೆ ಬಂಡೆಗಳನ್ನು ಪೂರ್ತಿ ತೆರವು ಮಾಡಿದ್ದು ಆದರೂ ಸನತ್ ಪತ್ತೆಯಾಗಿಲ್ಲ .ನಿನ್ನೆ ಫಾಲ್ಸ್ ಗೆ ಜೆಸಿಬಿ ತರಿಸಿದ್ದು ಇಂದು ಕಾರ್ಯಾಚರಣೆಗೆ ಇಳಿದಿದೆ.

ಸನತ್ ಜೊತೆಯಲ್ಲಿದ್ದ ಯುವಕರ ಹೇಳಿಕೆ ಅನುಮಾನ ಕಂಡುಬಂದಿದ್ದು ಮೊದಲು ಸನತ್ ಜೊತೆ ಐದು ಜನ ಮಾತ್ರ ಫಾಲ್ಸ್ ಗೆ ಹೋಗಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದರು ನಿನ್ನೆ ಏಳು ಜನ ಎಂದು ಗೊಂದಲದ ಹೇಳಿಕೆ ನೀಡಿದ್ದು ಪೊಲೀಸರು ನಿನ್ನೆ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -
spot_img

Latest News

error: Content is protected !!