- Advertisement -
![]()
- Advertisement -
ಬೆಳಗಾವಿ : ಕೊರೊನಾ ಅನ್ನೋ ಹೆಮ್ಮಾರಿ ಯಾರಿಗೆ ಹೇಗೆ ಬರುತ್ತೆ ಅಂತಾ ಕಂಡುಹಿಡಿಯೋದೇ ಈಗ ದೊಡ್ಡ ಸವಾಲು. ಯಾರಿಂದ ಬೇಕಾದ್ರೂ ಕೊರೊನಾ ಬರ್ಬೋದು ಅನ್ನೋದಂತು ಸತ್ಯ.
ಬೆಳಗಾವಿಯಲ್ಲಿ ಗಲ್ಲಿ ಗಲ್ಲಿಗೆ ಹೋಗಿ ಬಳೆ ತೊಡಿಸುತ್ತಿದ್ದ ಬಳೆಗಾರ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದೀಗ ಆಕೆಯ ಕೈಯಲ್ಲಿ ಬಳೆ ತೊಡಿಸಿಕೊಂಡವರು ಭಯ ಪಡುವಂತಾಗಿದೆ. ಬೆಳಗಾವಿಯ ಮಾಲಿಗಲ್ಲಿ ನಿವಾಸಿಯಾಗಿರುವ ಈಕೆ 200 ಕ್ಕೂ ಮಂದಿಗೆ ಬಳೆ ತೊಡಿಸಿದ್ದಾಳೆ. ಅವರೆಲ್ಲರಿಗೂ ಇದೀಗ ಆತಂಕ ಶುರುವಾಗಿದೆ.
ಮತ್ತೊಂದು ಕಡೆ ಬಳೆಗಾರ್ತಿಯ ಟ್ರಾವೆಲ್ ಹಿಸ್ಟರಿ ಕೇಳಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚೋದು ಅಧಿಕಾರಿಗಳಿಗೆ ಬಹು ದೊಡ್ಡ ಸವಾಲಾಗಿದೆ. ಪ್ರತಿ ಗಲ್ಲಿ ಗಲ್ಲಿಗೂ ಹೋಗಿ ಬಳೆ ಮಾರುತ್ತಿದ್ದ ಈಕೆ ಇದೀಗ ಎಲ್ಲರಿಗೂ ಕೊರೊನಾ ಬಳೆ ತೊಡಿಸಿದಂತಾಗಿದೆ.
- Advertisement -


