Thursday, May 2, 2024
Homeಕರಾವಳಿಪುತ್ತೂರು; ಅಧಿಕಾರಿಗಳ ಯಡವಟ್ಟಿನಿಂದಾಗಿ ಕೆಲಸದಿಂದಲೇ ವಜಾ ಆದ ಅರಣ್ಯಾಧಿಕಾರಿ

ಪುತ್ತೂರು; ಅಧಿಕಾರಿಗಳ ಯಡವಟ್ಟಿನಿಂದಾಗಿ ಕೆಲಸದಿಂದಲೇ ವಜಾ ಆದ ಅರಣ್ಯಾಧಿಕಾರಿ

spot_img
- Advertisement -
- Advertisement -

ಪುತ್ತೂರು; ಅಧಿಕಾರಿಗಳ ಯಡವಟ್ಟಿನಿಂದಾಗಿ ಅರಣ್ಯಾಧಿಕಾರಿ ಕೆಲಸದಿಂದಲೇ ವಜಾ ಆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಜಾಗೊಂಡಿರುವವರು.

ಕಳೆದ ಏಳು ತಿಂಗಳ ಹಿಂದೆ ಸಂಜೀವ ಪೂಜಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಜನೆ ಕುರಿತು ಧರ್ಮ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ  ಅವರನ್ನು ಅಮಾನತು ಮಾಡಿ ಅದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಸಂಜೀವ ಪೂಜಾರಿ ಕೆಎಸ್ಎಟಿನಲ್ಲಿ ಅಮಾನತಿನ ಬಗ್ಗೆ ಪ್ರಶ್ನಿಸಿ ನ್ಯಾಯ ದೊರಕಿಸುವಂತೆ ಅವರು ಮನವಿ ಮಾಡಿದ್ದರು.

ಆಡಳಿತ ನ್ಯಾಯಾಧೀಕರಣ ಮಂಡಳಿಯಲ್ಲಿ ಸಂಜೀವ ಪೂಜಾರಿಗೆ ನ್ಯಾಯ ದೊರಕಿತ್ತು.ಆದರೆ ಮಂಡಳಿಯ ಆದೇಶ ಪ್ರತಿಯನ್ನ ತಪ್ಪಾಗಿ ಅರ್ಥೈಸಿದ ಕಾರಣ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಆದೇಶ ಪ್ರತಿಯಲ್ಲಿ ಸಂಜೀವ ಪೂಜಾರಿಯವರ ಪ್ರಕರಣ ವಜಾಗೊಂಡಿದೆ ಎಂದು ನಮೂದಾಗಿತ್ತು. ಆದರೆ  ಅರಣ್ಯಾಧಿಕಾರಿಗಳು ಪ್ರಕರಣವನ್ನು ವಜಾ ಮಾಡುವ ಬದಲು ಸಂಜೀವ ಪೂಜಾರಿ ಅವರನ್ನೇ ಕೆಲಸದಿಂದ ವಜಾ ಮಾಡಿ ಎಂದು ಆದೇಶದಲ್ಲಿ ಬರೆಯಲಾಗಿದೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡು ಯಡವಟ್ಟು ಮಾಡಿದ್ದಾರೆ.

- Advertisement -
spot_img

Latest News

error: Content is protected !!