ಮಂಗಳೂರು: ನಗರದ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ಬೈಕ್ ಕಳ್ಳತನ ಪ್ರಕರಣ ನಡೆಯುತ್ತಿದೆ. ಕಳೆದ ಎರಡು ಮೂರು ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ನಿಲ್ಲಿಸಿದ್ದ ಬೈಕ್ ಕಳವು ನಡೆಸಿದ್ದಾರೆ. ಈ ಬಗ್ಗೆ ಬಂದರು, ಬರ್ಕೆ, ಕದ್ರಿ, ಪಾಂಡೇಶ್ವರ ಪುಕರಣ ದಾಖಲಾಗಿದೆ. ಸದ್ಯ ಮಂಗಳೂರು ಪೊಲೀಸರು ಈ ಕಳ್ಳರ ಬೆನ್ನು ಬಿದ್ದಿದ್ದಾರೆ.
ಕಳೆದ 2-3 ತಿಂಗಳಿಂದ ನಡೆಯುತ್ತಿದ್ದ ಕೃತ್ಯದ ಹಿಂದೆ ತಂಡವೊಂದು ಕೈಚಳಕ ತೋರಿದೆ ಎಂಬ ಅನುಮಾನ ಕಾಡುತ್ತಿದೆ. ಕಾರಣ ಎಲ್ಲಾ ಪ್ರಕರಣಗಳಲ್ಲೂ ಸಾಮ್ಯತೆ ಇರುವುದರಿಂದ ಒಂದು ತಂಡದಿಂದ ಈ ಕೃತ್ಯ ನಡೆಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ.
ಆ.30ರಂದು ನಗರದ ಮಾನಸಾ ಟವರ್ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಸ್ಕೂಟರ್ ಕಳವಾಗಿತ್ತು. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆ.11ರಂದು ಕಾರ್‌ಸ್ಟ್ರೀಟ್‌ನ ಫ್ಲವರ್ ಮಾರ್ಕೆಟ್ ಸಮೀಪ ಸ್ಕೂಟರ್ ಪಾರ್ಕ್ ಮಾಡಿ ಹಿಂತಿರುಗಿ ಬಂದಾಗ ಕಳವು ಮಾಡಿದ್ದರು. ಈ ಬಗ್ಗೆ, ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.14ರಂದು ನಗರದ ಹಂಪನಕಟ್ಟೆ ಬಳಿ ನಿಲ್ಲಿಸಿದ ಬೈಕನ್ನು ಕಳವು ಮಾಡಲಾಗಿದ್ದು, ಈ ಬಗ್ಗೆ ನಗರ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನ್‌ಲಾಕ್ ಬಳಿಕ ನಗರದಲ್ಲಿ ಸರಗಳ್ಳತನ ಬೈಕ್ ಕಳವು ಮಾಡುವವರು ಮತ್ತೆ ಸಕ್ರಿಯರಾಗಿದ್ದಾರೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ನಂಬರ್ ಪ್ಲೇಟ್ ಸೇರಿದಂತೆ ಬೈಕ್ ರೂಪ ಬದಲಿಸಿ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿತ್ತು.