Saturday, May 4, 2024
Homeಕರಾವಳಿಕೈಕಂಬದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕರ ಭೇಟಿ!

ಕೈಕಂಬದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕರ ಭೇಟಿ!

spot_img
- Advertisement -
- Advertisement -

ಬಂಟ್ವಾಳ: ತಾಲೂಕಿನ ಕೈಕಂಬದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯ ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೇಂದ್ರದ ಅಭಿವೃದ್ಧಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡುವ ಭರವಸೆ ನೀಡಿದ್ದು, ತುರ್ತು ಅವಶ್ಯಕತೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲು ಸೂಚಿಸಿದರು.ತಾಲೂಕಿನಲ್ಲಿ ನಡೆದ ವ್ಯಾಕ್ಸಿನೇಷನ್‌ ಬಗ್ಗೆಯೂ ಮಾಹಿತಿ ಪಡೆದು ಕೊಂಡರು.ವ್ಯಾಕ್ಸಿನೇಷನ್‌ ಆಗದ ಹಿಂದೆ ಉಳಿದಿರುವ ಭಾಗದಲ್ಲಿ ನೂರಕ್ಕೆ ನೂರು ವ್ಯಾಕ್ಸಿನೇಷನ್‌ ಪಡೆದುಕೊಳ್ಳುವ ಸಲುವಾಗಿ ಅಯಾಯ ಭಾಗದ ಜನಪ್ರತಿನಿಧಿಗಳು ಪ್ರಯತ್ನ ಮಾಡುವಂತೆ ಅವರು ತಿಳಿಸಿದರು.

ಗಡಿ ಭಾಗದ ಆಳಿಕೆ, ಅಡ್ಯನಡ್ಕ ಪೆರುವಾಯಿ ಗ್ರಾಮಗಳಲ್ಲಿ 99 ಪರ್ಸೆಂಟ್ ಹಾಗೂ ಪುಣಚ, ಕನ್ಯಾನ 95 ಪರ್ಸೆಂಟ್ ಪ್ರಥಮ ಡೋಸ್ ವ್ಯಾಕ್ಸಿನೇಷನ್‌ ನಡೆದಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಶಾಸಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರ ಪ್ರಾಥಮಿಕ‌ ಆರೋಗ್ಯ ಕೇಂದ್ರದ ಅರೋಗ್ಯ ರಕ್ಷಾ ಸಮಿತಿ ಯ ಅಧ್ಯಕ್ಷೆ ಜಯಂತಿ ವಸಂತ ರಾಜೀವ ಪಲ್ಕೆ, ರಕ್ಷಾ ಸಮಿತಿ ಯ ಸದಸ್ಯ ರಾದ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಕೇಶವ ದೈಪಲ, ಕಿರಣ್ ಮಸ್ಕರೇನಸ್, ಪುರಸಭಾ ಸದಸ್ಯ ಹರಿಪ್ರಸಾದ್, ಪ್ರಮುಖ ರಾದ ಜಯಂತ ರಾಜೀವ ಪಲ್ಕೆ, ಕಿಶೋರ್ ಕುಲಾಲ್ ರಾಜೀವ ಪಲ್ಕೆ, ಬೋಜ ಸಾಲ್ಯಾನ್ ಕೈಕಂಬ,ವಿಶ್ವನಾಥ ಪೂಜಾರಿ ಕೈಕಂಬ,ಸತೀಶ್ ಶೆಟ್ಟಿ ಮೊಡಂಕಾಪು, ನಗರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ! ಅಶ್ವಿನಿ ಹಾಗೂ ಕೇಂದ್ರ ದ ಸಿಬ್ಬಂದಿಗಳು ಹಾಜರಿದ್ದರು.

- Advertisement -
spot_img

Latest News

error: Content is protected !!