Monday, June 8, 2026
HomeUncategorizedಬಂಟ್ವಾಳ: ನಿಂತಿದ್ದ ಕಾರುಗಳಿಗೆ ಮತ್ತೊಂದು ಕಾರು ಡಿಕ್ಕಿ; ಮೂರು ಕಾರುಗಳು ಜಖಂ

ಬಂಟ್ವಾಳ: ನಿಂತಿದ್ದ ಕಾರುಗಳಿಗೆ ಮತ್ತೊಂದು ಕಾರು ಡಿಕ್ಕಿ; ಮೂರು ಕಾರುಗಳು ಜಖಂ

- Advertisement -
- Advertisement -

ಬಂಟ್ವಾಳ: ನಿಂತಿದ್ದ ಕಾರುಗಳಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಮೂರು ಕಾರುಗಳು ಜಖಂ ಆಗಿರುವ ಘಟನೆ ಫರಂಗಿಪೇಟೆಯ ಕಾಂತಪ್ಪ ಪೂಂಜ ಸಂಕೀರ್ಣ ಎದುರು ನಡೆದಿದೆ.

 ಬಿ.ಸಿ.ರೋಡು ಕಡೆಯಿಂದ ಅತಿ ವೇಗದಲ್ಲಿ ಬಂದ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಫರಂಗಿಪೇಟೆಯಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಮಾರುತಿ ಓಮ್ನಿ ಮತ್ತು ಮಾರುತಿ ಆಲ್ಟೊ ಕಾರಿಗೆ ಢಿಕ್ಕಿಯಾಗಿದ್ದು, ಅದರಲ್ಲಿ ಒಂದು ಕಾರು ರಿಪೇರಿಗೆ ನಿಲ್ಲಿಸಿದ್ದ ಟಿಪ್ಪರ್ ಗೆ ಢಿಕ್ಕಿಯಾಗಿದೆ.

ಓಮ್ನಿ ಮತ್ತು ಟಿಪ್ಪರ್ ನಡುವೆ ಸಿಲಿಕಿದ ಮಾರುತಿ ಆಲ್ಟೊ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!