Tuesday, June 16, 2026
Homeಕರಾವಳಿಮಂಗಳೂರುಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯು.ಕೆ.ಜಿ. ಬಾಲಕಿ ಚಿಕಿತ್ಸೆ ಫಲಿಸದೇ ಸಾವು

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯು.ಕೆ.ಜಿ. ಬಾಲಕಿ ಚಿಕಿತ್ಸೆ ಫಲಿಸದೇ ಸಾವು

- Advertisement -
- Advertisement -

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯು.ಕೆ.ಜಿ. ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ.ಅಲ್ಲಿಪಾದೆ ಅನೇಜ ಛಾಯಾ ಎಂಬವರ ಮಗಳು ಅರ್ನಿಕಾ ( 6) ಮೃತ ಬಾಲಕಿ.

‌‌ಬಂಟ್ವಾಳ ದೇವಳ ಶಾಲೆಯ ಯು.ಕೆ.ಜಿ.ವಿದ್ಯಾರ್ಥಿನಿಯಾಗಿದ್ದ ಬಾಲಕಿ ಶುಕ್ರವಾರ ಶಾಲೆಗೆ ಹೋಗಿದ್ದಳು. ಶನಿವಾರ ಶಾಲೆಗೆ ರಜೆ ಇತ್ತು. ಆದಿತ್ಯವಾರ ಜ್ವರದ ಕಾರಣ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾಳೆ ಎನ್ನಲಾಗಿದೆ

- Advertisement -

Latest News

error: Content is protected !!