Thursday, August 6, 2026
Homeಕರಾವಳಿಮಂಗಳೂರುಬಂಟ್ವಾಳ: ಟಿಪ್ಪರ್ -ಸ್ಕೂಟರ್ ಅಪಘಾತ, ಯುವಕ ಸಾವು; ಸವಾರ ಗಂಭೀರ

ಬಂಟ್ವಾಳ: ಟಿಪ್ಪರ್ -ಸ್ಕೂಟರ್ ಅಪಘಾತ, ಯುವಕ ಸಾವು; ಸವಾರ ಗಂಭೀರ

- Advertisement -
- Advertisement -

ಬಂಟ್ವಾಳ: ಟಿಪ್ಪರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ಮೃತಪಟ್ಟು, ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಬಿ.ಸಿ. ರೋಡ್‌ನ ಎನ್.ಜಿ. ಸರ್ಕಲ್ ಬಳಿ ಆ.06ರ ಸಂಜೆ ನಡೆದಿದೆ.

ಸ್ಕೂಟರ್‌ನಲ್ಲಿದ್ದ ಸಹಸವಾರ ಯಶ್ವಂತ್ ಕುಲಾಲ್ ಮೃತಪಟ್ಟಿದ್ದು, ಸವಾರ ದಯಾನಂದ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸ್ಕೂಟರ್‌ಗೆ, ಕಲ್ಲಡ್ಕದಿಂದ ಲೊರೆಟ್ಟೊ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಟಿಪ್ಪರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಘಟನೆಗೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಬಂಟ್ವಾಳದ ಸಲ್ಮಾನ್ ಫಾರೂಕ್ (33) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!