Saturday, June 29, 2024
Homeಕರಾವಳಿಬಂಟ್ವಾಳ: ಕ್ವಾರಂಟೈನ್ ವ್ಯವಸ್ಥೆ ಹಿನ್ನಲೆ, ವಸತಿ ಗೃಹ ಮಾಲಕರೊಂದಿಗೆ ಶಾಸಕರ ಸಭೆ

ಬಂಟ್ವಾಳ: ಕ್ವಾರಂಟೈನ್ ವ್ಯವಸ್ಥೆ ಹಿನ್ನಲೆ, ವಸತಿ ಗೃಹ ಮಾಲಕರೊಂದಿಗೆ ಶಾಸಕರ ಸಭೆ

spot_img
- Advertisement -
- Advertisement -

ಬಂಟ್ವಾಳ: ಹೊರರಾಜ್ಯದಿಂದ ಆಗಮಿಸುವ ಬಂಟ್ವಾಳ ಸುತ್ತಮುತ್ತಲಿನ ನಾಗರೀಕರ ಕ್ವಾರಂಟೈನ್ ವ್ಯವಸ್ಥೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ವಸತಿಗೃಹಗಳ ಮಾಲಕರ ಸಭೆಯು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಬಿ.ಸಿ.ರೋಡ್ ಕಚೇರಿಯಲ್ಲಿ ಇಂದು ನಡೆಯಿತು.

ಕ್ವಾರಂಟೈನ್ ನಲ್ಲಿರುವವರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಸೂಚಿಸಿದರು. ಈ ಸಂದರ್ಭ ಲಾಡ್ಜ್ ಮಾಲೀಕರಿಗೆ ಮತ್ತು ಆಡಳಿತ ಸಿಬ್ಬಂದಿಗಳಿಗೆ ತಾಲೂಕು ತಹಶೀಲ್ದಾರ್ ರಶ್ಮೀ ಎಸ್.ಆರ್. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸೂಕ್ತ ಸಲಹೆ,ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್, ಶಾಸಕರ ಆಪ್ತ ಕಾರ್ಯದರ್ಶಿ ದಿನೇಶ್ ಮತ್ತು ವಿವಿಧ ವಸತಿಗೃಹಗಳ ಮಾಲಕರು ಹಾಗೂ ಆಡಳಿತ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!