Sunday, May 5, 2024
Homeಕರಾವಳಿಬಂಟ್ವಾಳ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, 80 ಸಾವಿರ ರೂ ಮೌಲ್ಯದ ಸೊತ್ತು ವಶಕ್ಕೆ

ಬಂಟ್ವಾಳ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, 80 ಸಾವಿರ ರೂ ಮೌಲ್ಯದ ಸೊತ್ತು ವಶಕ್ಕೆ

spot_img
- Advertisement -
- Advertisement -

ಬಂಟ್ವಾಳ: ಸಜಿಪ ಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ವ್ಯಕ್ತಿಯೋರ್ವ ಮಾರಾಟಕ್ಕೆ ತರುತ್ತಿದ್ದ ಸುಮಾರು 30 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಬಂಟ್ವಾಳ ನಗರ ಪೊಲೀಸರು ಮತ್ತು ಬಂಟ್ವಾಳ ಡಿವೈಎಸ್ಪಿ ರವರ ವಿಶೇಷ ತಂಡ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಸಜಿಪ ಮೂಡ ಗ್ರಾಮದ ಸುಭಾಷ್ ನಗರ, ಗುರು ಮಂದಿರದ ಬಳಿಯ ಇಲ್ಯಾಸ್ ಬಂಧಿತ ಆರೋಪಿ. ಈತ ಕೇರಳದ ಉಪ್ಪಳ ಕಡೆಯಿಂದ ಗಾಂಜಾವನ್ನು ತಂದು ಸಜಿಪ ಪ್ರದೇಶದ ಕಡೆಗಳಲ್ಲಿ ಪ್ಯಾಕೆಟ್ಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನಿಂದ 1.4 ಕೆ.ಜಿ ಗಾಂಜಾ ಮತ್ತು ಸಾಗಾಟಕ್ಕೆ ಬಳಸಿದ ಆಕ್ಟಿವಾ ಹೋಂಡಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ‌ ಒಟ್ಟು ಮೌಲ್ಯ ರೂ 80 ಸಾವಿರ ಅಗಿದೆ.

ಈ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹೃಷಿಕೇಷ್ ಭಗವಾನ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಭಾಸ್ಕರ ಒಕ್ಕಲಿಗ ರವರ ನಿರ್ದೇಶನದಂತೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಲೈಂಟೈನ್ ಡಿಸೋಜಾರವರ ಆದೇಶದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಣಕರಾದ ಶ್ರೀ ಚೆಲುವರಾಜು‌, ಉಪನಿರೀಕ್ಷಕರಾದ ಶ್ರೀ ಅವಿನಾಶ್, ಏ.ಎಸ್.ಐ ಶ್ರೀ ಗಿರೀಶ್ ಮತ್ತು ಬಂಟ್ವಾಳ ಡಿ.ವೈ.ಎಸ್.ಪಿ ಅವರ ವಿಶೇಷ ತಂಡದ ಸಿಬ್ಬಂದಿಗಳಾದ ಉದಯ ರೈ, ಪ್ರವೀಣ್ ದೇವಾಡಿಗ, ಪ್ರಶಾಂತ್, ಇರ್ಷಾದ್ ಪಡಂಗಡಿ, ಗೋಣಿಬಸಪ್ಪ, ಕುಮಾರ್ ಹೆಚ್.ಕೆ ಮತ್ತು ವಿವೇಕ್ ರವರು ಭಾಗವಹಿಸಿರುತ್ತಾರೆ. ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.

- Advertisement -
spot_img

Latest News

error: Content is protected !!