Friday, June 2, 2023
Homeಕರಾವಳಿಬಂಟ್ವಾಳ: ವಾಟ್ಸಾಪ್ ನಲ್ಲಿ ಮುಸ್ಲಿಂ ಸಮುದಾಯದ ನಿಂದನೆ, ಅಡ್ಮಿನ್ ಗಳ ವಿರುದ್ಧ ದೂರು ದಾಖಲು

ಬಂಟ್ವಾಳ: ವಾಟ್ಸಾಪ್ ನಲ್ಲಿ ಮುಸ್ಲಿಂ ಸಮುದಾಯದ ನಿಂದನೆ, ಅಡ್ಮಿನ್ ಗಳ ವಿರುದ್ಧ ದೂರು ದಾಖಲು

- Advertisement -
- Advertisement -

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಮತ್ತು ಅವರ ಪತ್ನಿಯನ್ನು ಕೆಟ್ಟದಾಗಿ ನಿಂದಿಸಿರುವ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದಿಂದ ಬಂಟ್ವಾಳ ನಗರ ಠಾಣೆ ದೂರು ನೀಡಲಾಗಿದೆ.

ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಬಂಟ್ವಾಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫೀಕ್ ಎಂಬವರು ಮಂಜುನಾಥ ನಾಯಕ್ ಹಾಗೂ ವಾಟ್ಸ್‌ಆಯಪ್ ಗ್ರೂಪ್ ನ ಅಡ್ಮಿನ್ ಗಳ ವಿರುದ್ಧ ದೂರು ನೀಡಿದ್ದಾರೆ.

ಕರೆಂಟ್ ಎಫೇರ್ಸ್ ಎಂಬ ವಾಟ್ಸ್‌ಆಯಪ್ ಗ್ರೂಪ್ ನಲ್ಲಿ ಮಂಜುನಾಥ ನಾಯಕ್ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಮತ್ತು ಅವರ ಪತ್ನಿ ಆಯಿಷಾ ಅವರ ಬಗ್ಗೆ ಅತೀ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಇದಕ್ಕೆ ಗ್ರೂಪ್ ಅಡ್ಮಿನ್ ವಿವೇಕ್ ಶೆಟ್ಟಿ ಕುಮ್ಮಕ್ಕು ನೀಡಿದ್ದಾರೆ. ಪ್ರವಾದಿ ನಿಂದನೆಯಿಂದ ಮುಸ್ಲಿಮ್ ಸಮುದಾಯಕ್ಕೆ ನೋವಾಗಿದ್ದು ಈ ಹಿನ್ನೆಲೆಯಲ್ಲಿ ನಿಂದಿಸಿದ ಹಾಗೂ ಗ್ರೂಪ್ ನ ಎಲ್ಲಾ ಅಡ್ಮಿನ್ ಗಳ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

- Advertisement -

Latest News

error: Content is protected !!