Saturday, June 6, 2026
Homeಕರಾವಳಿಬಂಟ್ವಾಳ: ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ವಾಹನ ವಶ, ಚಾಲಕ ಪರಾರಿ

ಬಂಟ್ವಾಳ: ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ವಾಹನ ವಶ, ಚಾಲಕ ಪರಾರಿ

- Advertisement -
- Advertisement -

ಬಂಟ್ವಾಳ: ಅಕ್ರಮವಾಗಿ ಕೋಣ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಬಿ.ಸಿ.ರೋಡ್‌ನ‌ ಕೈಕಂಬದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಕೋಣ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ಚಾಲಕ ಕೋಣವೊಂದನ್ನು ವಾಹನದಲ್ಲಿ ಸಾಗಾಟ ಮಾಡುವ ವೇಳೆ ಬಂಟ್ವಾಳ ನಗರ ಠಾಣಾ ಪಿಎಸ್‌ಐ ಅವಿನಾಶ್‌ ನೇತೃತ್ವದ ತಂಡ ದಾಳಿ ನಡೆಸಿದೆ. ಪರಾರಿಯಾದ ಆರೋಪಿ ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

- Advertisement -

Latest News

error: Content is protected !!