Saturday, May 18, 2024
HomeಅಪರಾಧIAS, IPS ಅಧಿಕಾರಿಗಳ ಹನಿಟ್ಟ್ಯಾಪ್ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿಯ ಬಂಧನ!

IAS, IPS ಅಧಿಕಾರಿಗಳ ಹನಿಟ್ಟ್ಯಾಪ್ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿಯ ಬಂಧನ!

spot_img
- Advertisement -
- Advertisement -

ಬೆಂಗಳೂರು: ಪ್ರಭಾವಿ ರಾಜಕಾರಣಿಗಳು, ಐಪಿಎಸ್​, ಐಎಎಸ್ ಅಧಿಕಾರಿಗಳೂ ಸೇರಿದಂತೆ ಹೈ-ಪ್ರೊಫೈಲ್​ ವ್ಯಕ್ತಿಗಳನ್ನ ಯಾಮಾರಿಸಿ ಹೈಟೆಕ್ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಪೀಕಿದ್ದಾಳೆ ಎನ್ನುವ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಕಾಂಗ್ರೆಸ್​ ನಾಯಕಿಯೊಬ್ಬಳನ್ನ ಬಂಧಿಸಿದ್ದಾರೆ.

ಕಾಂಗ್ರೆಸ್ ನಾಯಕಿ ವಿದ್ಯಾ ಎನ್ನುವವರು ಇದೀಗ ಹನಿಟ್ರ್ಯಾಪ್ ಆರೋಪದಲ್ಲಿ ಬಂಧಿತರಾಗಿರುವವರು. ಎಐಸಿಸಿ ಸದಸ್ಯೆ ಆಗಿರೋ ವಿದ್ಯಾ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಕೂಡ ಆಗಿದ್ದಾರೆ. ಆರೋಪಿ ಸ್ಥಾನದಲ್ಲಿರುವ ವಿದ್ಯಾ, ತನ್ನ ಮೇಕ್​ ಅಪ್ ಭರಿತ ಸೌಂದರ್ಯದ ಮೂಲಕವೇ ದೆಹಲಿ ನಾಯಕರನ್ನ ಸೆಳೆದು ಹನಿಟ್ರ್ಯಾಪ್ ಮಾಡುತ್ತಿದ್ದಳು ಎನ್ನಲಾಗಿದೆ.

ಇದೇ ರೀತಿ ಬೆಂಗಳೂರು ನಗರದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರ ಜೊತೆ ಸಲುಗೆ ಬೆಳಸಿದ್ದ ವಿದ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ಕಾಂಟ್ರಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದಾರೆ. ಕೇಸ್ ದಾಖಲಿಸಿದ ಪೊಲೀಸರು ಆದರೀಗ ಕೊನೆಗೂ ಐಎಎಸ್, ಐಪಿಎಸ್, ಐಎಫ್ ಎಸ್, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಗಾಳಾ ಹಾಕುತ್ತಿದ್ದ ಈ ಮಹಿಳೆಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿದ್ಯಾಳನ್ನು ಬಂಧಿಸಿ ವಿಚಾರಣೆ ವೇಳೆ ಆಕೆಯ ಕತರ್ನಾಕ್ ಹಿಸ್ಟರಿ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!