Wednesday, June 26, 2024
Homeಕರಾವಳಿಮಂಗಳೂರುಐಸಿಎಸ್ ನಂಟು ಆರೋಪ; ಮಾಜಿ ಶಾಸಕ ದಿ. ಬಿ.ಎಂ. ಇದಿನಬ್ಬ ಮೊಮ್ಮಗನಿಗೆ ದೆಹಲಿ ಹೈಕೋರ್ಟ್ ಜಾಮೀನು

ಐಸಿಎಸ್ ನಂಟು ಆರೋಪ; ಮಾಜಿ ಶಾಸಕ ದಿ. ಬಿ.ಎಂ. ಇದಿನಬ್ಬ ಮೊಮ್ಮಗನಿಗೆ ದೆಹಲಿ ಹೈಕೋರ್ಟ್ ಜಾಮೀನು

spot_img
- Advertisement -
- Advertisement -

ಮಂಗಳೂರು: ಐಸಿಸ್ ನಂಟು ಆರೋಪದಡಿ ಎನ್ ಐಎಯಿಂದ ಬಂಧಿತನಾಗಿದ್ದ ಮಾಜಿ ಶಾಸಕ ದಿ. ಬಿ.ಎಂ. ಇದಿನಬ್ಬ ಮೊಮ್ಮಗನಿಗೆ ಜಾಮೀನು‌ ದೊರೆತಿದೆ.

ದಿ. ಇದಿನಬ್ಬ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ನಿಂದ ಜಾಮೀನು ದೊರೆತಿದ್ದು, ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು.

2021ರ ಆಗಸ್ಟ್ ನಲ್ಲಿ ಅಮ್ಮರ್ ಅಬ್ದುಲ್ ರೆಹಮಾನ್ ಬಂಧಿಸಲ್ಪಟ್ಟಿದ್ದು, ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಆದರೆ ವಿಚಾರಣಾಧೀನ ಕೋರ್ಟ್ ಜಾಮೀನು‌ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಸುಧೀರ್ಘ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಐಸಿಸ್ ಬಾವುಟ, ಕರಪತ್ರ ಮೊಬೈಲ್ ಪೋನ್ ನಲ್ಲಿದ್ದರೆ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ ಎಂಬ ಅಂಶವನ್ನು‌ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣ ಸಂಬಂಧ ಹಲವು ಜನರ ವಿರುದ್ದ ಎನ್ ಐಎ ಚಾರ್ಜ್ ಶೀಟ್ ಸಲ್ಲಿಸಿದ್ದು, ದಿ.‌ ಇದಿನಬ್ಬ ಸೊಸೆ ದೀಪ್ತಿ ಮಾರ್ಲಳನ್ನೂ ಎನ್ ಐಎ ಈ ಹಿಂದೆಯೇ ಬಂಧಿಸಿತ್ತು. ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಇನ್ನೂ ಎನ್ ಐಎ ವಶದಲ್ಲೇ ಇದ್ದಾರೆ.

- Advertisement -
spot_img

Latest News

error: Content is protected !!