Sunday, April 28, 2024
Homeತಾಜಾ ಸುದ್ದಿದಾಖಲೆ ಬರೆದಿದ್ದ 'ಬಾಹುಬಲಿ' ತೆರೆಕಂಡು ಇಂದಿಗೆ 5 ವರ್ಷ

ದಾಖಲೆ ಬರೆದಿದ್ದ ‘ಬಾಹುಬಲಿ’ ತೆರೆಕಂಡು ಇಂದಿಗೆ 5 ವರ್ಷ

spot_img
- Advertisement -
- Advertisement -

ಹೈದರಾಬಾದ್: ಪ್ರತಿಭಾವಂತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ನಿರ್ದೇಶನದ ಸಿನಿಮಾ ‘ಬಾಹುಬಲಿ: ದ ಬಿಗಿನಿಂಗ್​’ ತೆರೆಕಂಡು ಇಂದಿಗೆ ಸರಿಯಾಗಿ 5 ವರ್ಷ. ಈ ಸಂತೋಷವನ್ನು ನಟ ಪ್ರಭಾಸ್ ಹಾಗೂ ರಾಣಾ ದಗ್ಗುಪಾಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಾಜಮೌಳಿ ಅವರ ಕನಸಿನ ಕೂಸಾಗಿದ್ದ ‘ಬಾಹುಬಲಿ’ ತೆರೆಕಂಡ ನಂತರ ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸ ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿತು. ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಜೊತೆ ಇದರಲ್ಲಿ ನಟಿಸಿದ ಪ್ರತಿ ಕಲಾವಿದನಿಗೂ ರಾಷ್ಟ್ರಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಈ ಸಿನಿಮಾದಿಂದಾಗಿ ಬೇರೆ ಚಿತ್ರರಂಗದವರು ದಕ್ಷಿಣ ಭಾರತದ ಸಿನಿಮಾಗಳತ್ತ ತಿರುಗಿ ನೋಡುವಂತೆ ಆಗುತ್ತು.

- Advertisement -
spot_img

Latest News

error: Content is protected !!