Saturday, June 6, 2026
Homeತಾಜಾ ಸುದ್ದಿಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು

ಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು

- Advertisement -
- Advertisement -

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರ ಪದಕ ಬೇಟೆ ಮುಂದುವರೆದಿದ್ದು ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. 

ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಕೆನಡಾ ಆಟಗಾರ್ತಿ ಮಿಚೆಲ್ ಲೀ ವಿರುದ್ಧ 21-15, 21-13 ಅಂತರದ ಸೆಟ್ ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 

ಸಿಂಧು ಇದುವರೆಗೆ ಭಾರತದ ಸಿಂಗಲ್ಸ್ ನಲ್ಲಿ ಹೆಚ್ಚು ಸಾಧನೆ ಮಾಡಿರುವ ಆಟಗಾರ್ತಿಯಾಗಿದ್ದು  ಫೈನಲ್‌ನಲ್ಲಿ ಕೆನಡಾದ ಎದುರಾಳಿಯ ವಿರುದ್ಧ ಸ್ವಲ್ಪ ಕಷ್ಟಪಟ್ಟರು. ಮೊದಲ ಗೇಮ್‌ನಲ್ಲಿ ಮಿಚೆಲ್ ನೆಟ್‌ನ ಹತ್ತಿರ ಆಡುವ ಮೂಲಕ ಪಾಯಿಂಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಸಿಂಧು ಹೆಚ್ಚು ಆಕ್ರಮಣಕಾರಿ ಆಟವಾಡಿದರು. ವಿರಾಮದ ನಂತರ ಸಿಂಧು ಮೂರು ನೇರ ಅಂಕಗಳನ್ನು ಪಡೆದು ಅಂತಿಮವಾಗಿ ಗೆಲುವುದನ್ನ ದಾಖಲಿಸಿದರು.

- Advertisement -

Latest News

error: Content is protected !!