Friday, March 29, 2024
Homeತಾಜಾ ಸುದ್ದಿಬಿ.ಎಡ್ ಮತ್ತು ಡಿ.ಎಡ್ ಪರೀಕ್ಷಾರ್ಥಿಗಳ ವಯೋಮಿತಿ ಏರಿಕೆ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಬಿ.ಎಡ್ ಮತ್ತು ಡಿ.ಎಡ್ ಪರೀಕ್ಷಾರ್ಥಿಗಳ ವಯೋಮಿತಿ ಏರಿಕೆ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

spot_img
- Advertisement -
- Advertisement -

ಬೆಂಗಳೂರು: ಬಿ.ಎಡ್ ಮತ್ತು ಡಿ.ಎಡ್ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಳ ವಯೋಮಿತಿಯನ್ನು ಏರಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು(ನೇಮಕಾತಿ) (ವಿಶೇಷ) ನಿಯಮಗಳು 2022ಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಇದರ ಅನ್ವಯ ಬಿ.ಎಡ್ ಮತ್ತು ಡಿ.ಎಡ್ ಪರೀಕ್ಷಾರ್ಥಿಗಳಿಗೆ ವಯೋಮಿತಿ ಎಸ್ ಸಿ, ಎಸ್ ಟಿ ಗೆ 47 ವರ್ಷ, ಓಬಿಸಿಗೆ 45 ವರ್ಷ ಮತ್ತು ಜನರಲ್ 42 ವರ್ಷಗಳಿಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ.

5 ವರ್ಷಗಳವರೆಗೆ ಈ ವಿನಾಯಿತಿ ನೀಡಲಾಗಿದ್ದು, ಅಂಕಗಳಲ್ಲೂ ವಿನಾಯಿತಿ ನೀಡಲಾಗಿದೆ.

ಸುಮಾರು ವರ್ಷಗಳಿಂದ ನೇಮಕಾತಿ ನಡೆಯದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಯೋಮಿತಿ ಏರಿಕೆ ನಿರ್ಧಾರ ತೆಗೆದುಕೊಂಡಿದೆ.

- Advertisement -
spot_img

Latest News

error: Content is protected !!