Monday, August 31, 2026
Homeತಾಜಾ ಸುದ್ದಿಆಟೋ ಡ್ರೈವರ್ ಗೆ ಒಲಿದ ಅದೃಷ್ಣ ಲಕ್ಷ್ಮೀ; ಕೇರಳ ಲಾಟರಿಯಲ್ಲಿ 10 ಕೋಟಿ ಗೆದ್ದು ರಾತ್ರೋರಾತ್ರಿ...

ಆಟೋ ಡ್ರೈವರ್ ಗೆ ಒಲಿದ ಅದೃಷ್ಣ ಲಕ್ಷ್ಮೀ; ಕೇರಳ ಲಾಟರಿಯಲ್ಲಿ 10 ಕೋಟಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಚಾಲಕ

- Advertisement -
- Advertisement -

ಕೇರಳ; ಅದೃಷ್ಟ ಅನ್ನೋದು ಯಾವಾಗ ಯಾರ ಕೈ ಹಿಡಿಯುತ್ತೆ ಅಂತಾ ಹೇಳೋಕೆ ಸಾಧ್ಯತೆ ಇಲ್ಲ.  ಕೇರಳದ ಆಟೋ ಚಾಲಕರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಅದೃಷ್ಟ ಯಾವಾಗ ಯಾರಿಗೆ ಒಲಿಯುತ್ತದೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಜೀವನ ನಡೆಸಲು ಹೆಣಗಾಡುವ ಜನರು ರಾತ್ರೋರಾತ್ರಿ ಫೇಮಸ್‌ ಆಗುತ್ತಾರೆ. ಅದೃಷ್ಟ ಲಕ್ಷ್ಮಿ ಯಾವುದೋ ಒಂದು ರೂಪದಲ್ಲಿ ಅವರ ಕೈ ಹಿಡಿಯುತ್ತಾಳೆ.

ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ಆಟೋ ಚಾಲಕ ನಾಸರ್  ನಿನ್ನೆ ರಾತ್ರಿಯಷ್ಟೇ (ಬುಧವಾರ) ಲಾಟರಿ ಟಿಕೆಟ್ ಖರೀದಿಸಿದ್ದರು. ಗುರುವಾರ ಬೆಳಗ್ಗೆ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಗೆದ್ದು ಕೋಟ್ಯಾಧಿಪತಿಯಾಗಿದ್ದಾರೆ.

ಕೇರಳದ ಕಾರ್ತಿಕಪುರದ ರಾಜರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದರು. ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಹಣ ಗೆದ್ದಿದ್ದಾರೆ.

ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ತಿಳಿಸಿದ್ದಾರೆ. ಟಿಕೆಟ್ ಖರೀದಿಸಿದ ಒಂದೇ ರಾತ್ರಿಯಲ್ಲಿ ನಾಸಿರ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.

- Advertisement -

Latest News

error: Content is protected !!