Thursday, June 4, 2026
Homeಕರಾವಳಿಮಂಗಳೂರುಸುಳ್ಯ: ಆಟೋದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಸುಳ್ಯ: ಆಟೋದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

- Advertisement -
- Advertisement -

ಸುಳ್ಯ: ಆಟೋದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮರಳಿಸಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕೆವಿಜಿ ಆಟೋ ಪಾರ್ಕಿಂಗ್ ನಲ್ಲಿ ರತ್ನಾಕರ ಅಡ್ಪಂಗಾಯ ಅನ್ನುವವರು ಕಳೆದ ಕೆಲವು ವರ್ಷಗಳಿಂದ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರ ಆಟೋದಲ್ಲಿ ಪರಿವಾರಕಾನದ ನೌಫಲ್ ಅನ್ನುವವರ ಮಗಳು ಪ್ರಯಾಣಿಸುತ್ತಿದ್ದಾಗ ಆಕೆಯ ಚಿನ್ನದ ಆಭರಣ ಆಟೋದಲ್ಲಿ ಬಿದ್ದು ಹೋಗಿತ್ತು. ಇದು ಯಾರಿಗೂ ಗೊತ್ತಾಗಿರಲಿಲ್ಲ. ಈ ಬಗ್ಗೆ ನೌಫಲ್ ಆಟೋದವರಲ್ಲಿ ವಿಚಾರಿಸಿದಾಗ ಅವರು ತಮ್ಮ ಆಟೋವನ್ನು ಹುಡುಕಿದ್ದಾರೆ. ಆಗ ಸರ ಪತ್ತೆಯಾಗಿದೆ. ಬಳಿಕ ನೌಫಲ್ ಅವರಿಗೆ ತಿಳಿಸಿದ್ದಾರೆ.  ನೌಫಲ್ ಅವರು ಬಂದು ಚಿನ್ನದ ಸರವನ್ನು ರತ್ನಾಕರ ಅವರಿಂದ ಪಡೆದುಕೊಂಡಿದ್ದಾರೆ.

ರತ್ನಾಕರ ಅವರ ಪ್ರಾಮಾಣಿಕತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!