- Advertisement -
- Advertisement -
ಪುತ್ತೂರು; ಆಟೋ ರಿಕ್ಷಾ ಸಹಿತ ಚಾಲಕ ನಾಪತ್ತೆಯಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸೂತ್ರ ಬೆಟ್ಟು ನಿವಾಸಿ ಆಟೋ ರಿಕ್ಷಾ ಚಾಲಕ ಲೋಕೇಶ್ ನಾಪತ್ತೆಯಾದವರು. ಎ.21 ರಿಂದ ಲೋಕೇಶ್ ನಾಪತ್ತೆಯಾಗಿದ್ದಾರೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಎ.21 ರಂದು ಬೆಳಗ್ಗೆ 5.30ಕ್ಕೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಬಾಡಿಗೆ ಎಂದು ಹೋದ ಲೋಕೇಶ್ ವಾಪಾಸು ಬಂದಿಲ್ಲ. ಲೋಕೇಶ ಅವರ ಪತ್ನಿ ಸುವರ್ಣ ಬಿ.ಎಸ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
- Advertisement -