Saturday, May 25, 2024
Homeತಾಜಾ ಸುದ್ದಿಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಡ್ರಾಪ್ ಕೊಡಿಸೋದಾಗಿ ಹೇಳಿ ಯುವತಿಯ ಮೇಲೆರಗಿದ ಆಟೋ ಚಾಲಕ

ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ: ಡ್ರಾಪ್ ಕೊಡಿಸೋದಾಗಿ ಹೇಳಿ ಯುವತಿಯ ಮೇಲೆರಗಿದ ಆಟೋ ಚಾಲಕ

spot_img
- Advertisement -
- Advertisement -

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದೆ. ಡ್ರಾಪ್ ಕೊಡಿಸೋದಾಗಿ ಹೇಳಿ ಯುವತಿಯೊಬ್ಬಳನ್ನು ಕರೆದೊಯ್ದ ಆಟೋ ಚಾಲಕ ಅತ್ಯಾಚಾರವೆಸಗಿದ್ದಾನೆ.

ಬೆಂಗಳೂರಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ವ್ಯಾಸಂಗ ಮಾಡುತ್ತಿರುವ ಯುವತಿಯೊಬ್ಬಳು, ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಥಣಿ ಸಂದ್ರ ಮುಖ್ಯ ರಸ್ತೆಯಲ್ಲಿ ಬಸ್ಸಿಗಾಗಿ ಕಾಯತ್ತಿದ್ದ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಆರೋಪಿ ಮುಬಾರಕ್‌ ಎನ್ನುವ ಆಟೋ ಚಾಲಕ ಆಕೆಗೆ ಡ್ರಾಪ್ ಕೊಡೋದಾಗಿ ಹೇಳಿದ್ದಾನೆ.

ಬಳಿಕ ಹೋಗ  ಬೇಕಾದ ರಸ್ತೆ ಬಿಟ್ಟು ಬೇರೆ ರಸ್ತೆಯಲ್ಲಿ ಯುವತಿಯನ್ನು ಕರೆದೊಯ್ದಿದ್ದಾನೆ. ಆಗ ಯುವತಿ ಕಿರುಚಾಡಿದ್ದಾಳೆ. ಆಗ ಆತ ತನಗೆ ಬೇಕಾಗಿರುವವರು ಹಣ ನೀಡಬೇಕಾಗಿದೆ ಅಲ್ಲಿಗೆ ತೆರಳಿ ಹಣ ಪಡೆದುಕೊಂಡು ನಿಮ್ಮನ್ನು ನಿಮ್ಮ ಜಾಗಕ್ಕೆ ಬಿಡುವೆ ಅಂತ ಹೇಳಿದ್ದಾನಂತೆ. ಆದರೆ ಆ ಕಾಮುಕ ಆಟೋ ಚಾಲಕ ಆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬಳಿಕ ಯುವತಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಯುವತಿ ನಿರ್ಜನ ಪ್ರದೇಶದಿಂದ ರಸ್ತೆಗೆ ಬಂದು ರೋಡಿನಲ್ಲಿ ತೆರಳುತ್ತಿದ್ದ ಬೈಕ್‌ ಸವಾರರೊಬ್ಬರ ಸಹಾಯದಿಂದ ಸಂಪಿಗೆ ಹಳ್ಳಿ ಪೊಲೀಸ್‌ ಠಾಣೆಗೆ ಆಗಮಿಸಿ, ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಯುವತಿ ನೀಡಿದ ಆಟೋ ಸಂಖ್ಯೆಯಿಂದ ಅತ್ಯಾಚಾರಿ ಮುಬರಕ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
spot_img

Latest News

error: Content is protected !!