Thursday, June 4, 2026
Homeಕರಾವಳಿಬಿಜೆಪಿ ಮುಖಂಡ ಮತ್ತು ಮಹಿಳೆಯ ನಡುವಿನ ಆಡಿಯೋ ಪ್ರಕರಣ; ಎರಡನೇ ಬಾರಿ ರಕ್ಷಣೆ ಕೋರಿ ಠಾಣೆ...

ಬಿಜೆಪಿ ಮುಖಂಡ ಮತ್ತು ಮಹಿಳೆಯ ನಡುವಿನ ಆಡಿಯೋ ಪ್ರಕರಣ; ಎರಡನೇ ಬಾರಿ ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ಮಹಿಳೆ

- Advertisement -
- Advertisement -

ಪುತ್ತೂರು:  ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ಮಹಿಳೆಯ ನಡುವೆ ನಡೆದಿರುವ ದೂರವಾಣಿ ಕರೆಯ ಆಡಿಯೋ ತುಣುಕಿಗೆ ಸಂಬಂಧಿಸಿ ಇದೀಗ ಮಹಿಳೆಯು ಎರಡನೇ ಬಾರಿ ರಕ್ಷಣೆ ಕೋರಿ ನಗರ ಠಾಣೆಯ ಮೆಟ್ಟಿಲೇರಿದ್ದಾರೆ.

ಅಪರಿಚಿತ ವ್ಯಕ್ತಿಗಳು ತಮ್ಮ ಮನೆಯ ಸಮೀಪ ಓಡಾಡಿದ್ದು, ತನಗೆ ರಕ್ಷಣೆ ನೀಡುವಂತೆ ಮಹಿಳೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಕುರಿತಂತೆ ಪ್ರತಿಕ್ರಯಿಸಿರುವ ಪೊಲೀಸರು ಮನೆಯ ಸುತ್ತ ಭದ್ರತೆ ಕಲ್ಪಿಸಲಾಗಿದೆ ಎಂದು ಮಹಿಳೆಗೆ ಧೈರ್ಯ ತುಂಬಿರುವುದಾಗಿ ಮಾಹಿತಿ ಲಭಿಸಿದೆ.

ಮಹಿಳೆಯು ಶಿರಸಿ, ಬೆಂಗಳೂರು ಭಾಗದಲ್ಲಿ ಕೆಲಸ ನಿರ್ವಹಿಸಿದ್ದು, ಎರಡು ತಿಂಗಳಿಂದ ಪುತ್ತೂರಿನಲ್ಲಿ ನೆಲೆಸಿದ್ದರು. ಇದೀಗ ಆಡಿಯೋ ವೈರಲ್‌ ಆಗಿದ್ದು, ಮಹಿಳೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!