Saturday, June 28, 2025
Homeಕರಾವಳಿಮಂಗಳೂರುಮೂಡಬಿದರೆ; ಯುವತಿಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳಕ್ಕೆ ಯತ್ನ ಆರೋಪ

ಮೂಡಬಿದರೆ; ಯುವತಿಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳಕ್ಕೆ ಯತ್ನ ಆರೋಪ

spot_img
- Advertisement -
- Advertisement -

ಮೂಡಬಿದರೆ; ಯುವತಿಗೆ ಅನ್ಯಕೋಮಿನ ಯುವಕನೊಬ್ಬ ಲೈಂಗಿಕ ಕಿರುಕುಳಕ್ಕೆ ಯತ್ನಿಸಿರುವ ಆರೋಪ ಮೂಡಬಿದರೆಯಲ್ಲಿ ಕೇಳಿ ಬಂದಿದೆ.

ಕೋಟೆಬಾಗಿಲಿನ 19 ವರ್ಷದ ಯುವತಿಯೊಬ್ಬಳು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಪ್ರಾಂತ್ಯ ಗ್ರಾಮದ ಟೈಲರ್‌ ಅಂಗಡಿಯೊಂದಕ್ಕೆ ಹೋಗುತ್ತಿರುವಾಗ ಆಕೆಯ ಕ್ಲಾಸ್‌ಮೇಟ್‌ ಆಗಿದ್ದ ಅರ್ಷದ್‌ (21) ಎಂಬತ ಆಕೆಯನ್ನು ಅಡ್ಡಗಟ್ಟಿ “ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ’ ಎಂದು ಹೇಳಿ ತನ್ನ ಮೈ ಮೇಲೆ ಕೈ ಹಾಕಲು ಬಂದಿದ್ದಾನೆ ಎಂದು ಆರೋಪಿಸಿ  ಯುವತಿ ಮೂಡಬಿದಿರೆ ಠಾಣೆಗೆ ದೂರು ನೀಡಿದ್ದಾಳೆ.

ಘಟನೆ ನಡೆದಾಗ ತಾನು ಬೊಬ್ಬೆ ಹೊಡೆದ ಕೂಡಲೇ ಟೈಲರ್‌ ಹೊರಗೆ ಬಂದಿದ್ದಾರೆ. ಆಗ ಆರೋಪಿ ಸ್ಥಳದಿಂದ ಓಡಿ  ಹೋಗಿದ್ದಾನೆ ಎಂದು ಯುವತಿ ತಾನು ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಯುವತಿ ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಲತಃ ಇರುವೈಲಿನವನಾದ ಅರ್ಷದ್‌ ಮೂಡಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿದ್ದು, ಬಳಿಕ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಎನ್ನಲಾಗಿದೆ. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲವು ಸಮಯದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದು, ಗುರುವಾರ ಬಟ್ಟೆ ಹೊಲಿಸಲೆಂದು ಟೈಲರ್‌ ಅಂಗಡಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ.


ಹಿಂದೂ ಯುವತಿಯರನ್ನು ಗುರಿಯಾಗಿಸಿ ಪ್ರೀತಿ ಪ್ರೇಮ ಎಂಬ ನಾಟಕವಾಡಿ ಮೋಸ ಮಾಡಿ ಅವರನ್ನು ಮತಾಂತರ ಮಾಡುವ ಒಂದು ವ್ಯವಸ್ಥಿತ ಗುಂಪು ಇದ್ದು, ಇದರ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಮುಖ ಶರಣ್‌ ಕುಮಾರ್‌ ಪಂಪ್‌ವೆಲ್‌ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!