Sunday, June 7, 2026
Homeತಾಜಾ ಸುದ್ದಿಉಳ್ಳಾಲ: ಹಣಕಾಸಿನ ವಿಚಾರಕ್ಕೆ ಯುವಕನ ಕೊಲೆಯತ್ನ ಪ್ರಕರಣ: ಆರೋಪಿ ಬಂಧನ

ಉಳ್ಳಾಲ: ಹಣಕಾಸಿನ ವಿಚಾರಕ್ಕೆ ಯುವಕನ ಕೊಲೆಯತ್ನ ಪ್ರಕರಣ: ಆರೋಪಿ ಬಂಧನ

- Advertisement -
- Advertisement -

ಉಳ್ಳಾಲ: ಹಣಕಾಸಿನ ವಿಚಾರವಾಗಿ ಯುವಕನೊಬ್ಬನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಆರೀಫ್ ಎಂಬಾತನ ಮೇಲೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಉಚ್ಚಿಲ ಸಮೀಪ ನಸುಕಿನ ವೇಳೆ ಕೊಲೆ ಯತ್ನ ನಡೆದಿತ್ತು.

ತಲ್ಲತ್ ಎಂಬಾತನೇ ಬಂಧಿತ ಆರೋಪಿ. ಪ್ರಕರಣ ಸಂಬಂಧ ಈಗಾಗಲೇ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇನ್ನು ನೌಫಾಲ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.

- Advertisement -

Latest News

error: Content is protected !!