Friday, May 17, 2024
Homeಕರಾವಳಿಮಂಗಳೂರು:ಹೇರ್ ಬ್ಯಾಂಡ್ ನಲ್ಲಿತ್ತು ಚಿನ್ನದ ರಹಸ್ಯ;ವಿನೂತನ ಶೈಲಿಯಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ!

ಮಂಗಳೂರು:ಹೇರ್ ಬ್ಯಾಂಡ್ ನಲ್ಲಿತ್ತು ಚಿನ್ನದ ರಹಸ್ಯ;ವಿನೂತನ ಶೈಲಿಯಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ!

spot_img
- Advertisement -
- Advertisement -

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 350.330 ಗ್ರಾಂ. ಹಾಗೂ 115 ಗ್ರಾಂ ಮೌಲ್ಯದ ಚಿನ್ನವನ್ನು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ

ದುಬೈನಿಂದ ಮಹಿಳೆಯರ ಹೇರ್ ಬ್ಯಾಂಡ್‌ ನಲ್ಲಿ ಮೂಲಕ ಚಿನ್ನ ಸಾಗಟ ಮಾಡುತ್ತಿರುವ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇಂದು ಪತ್ತೆ ಹಚ್ಚಿದ್ದಾರೆ. ಹೇರ್ ಬ್ಯಾಂಡ್ ನ ಮೇಲ್ಭಾಗದಲ್ಲಿ ತಂತಿ ರೂಪದಲ್ಲಿ ಚಿನ್ನವನ್ನು ಅಡಗಿಸಿ ತಂದಿದ್ದು ತಪಾಸಣೆ ನಡೆಸಿದಾಗ 115 ಗ್ರಾಂ.ಚಿನ್ನ ಪತ್ತೆಯಾಗಿದೆ.ವಶಪಡಿಸಿಕೊಂಡ ಚಿನ್ನದ ಮೌಲ್ಯ 5,58,900 ರೂ. ಎಂದು ಅಂದಾಜಿಸಲಾಗಿದೆ.ದುಬೈನಿಂದ ಮಂಗಳೂರಿಗೆ ಆಗಮಿಸಿದ ಮುರುಡೇಶ್ವರದ ನಿವಾಸಿಯಾದ ಈತ ಸದ್ಯ ಪೋಲೀಸರ ವಶದಲ್ಲಿದ್ದಾನೆ.

ಮತ್ತೊಂದು ಪ್ರಕರಣದಲ್ಲಿ ಮನೋಕರ್ತಾಯಿನಿ ನೇತೃತ್ವದ ಕಸ್ಟಮ್ಸ್ ಅಧಿಕಾರಿಗಳ ತಂಡ ಕಾರ್ಯಾಚರಣೆಯ ಮೂಲಕ ಈ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಹಚ್ಚಿದ್ದು, ಆಗಸ್ಟ್ 12 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ಪ್ರಯಾಣಿಕನ ಬಳಿ ರೂ 16,85,087 ಮೌಲ್ಯದ 350.330 ಗ್ರಾಂ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ವಿಚಾರವನ್ನು ಅವರಿಂದು ಬಹಿರಂಗಪಡಿಸಿದ್ದಾರೆ. ಈ ಪ್ರಕರಣದಲ್ಲಿ ಕೇರಳದ ಕಾಸರಗೋಡು ಮೂಲದ ಪ್ರಯಾಣಿಕ ಮಿಕ್ಸರ್ ಡ್ರೈಂಡರ್ ಒಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದ.

- Advertisement -
spot_img

Latest News

error: Content is protected !!