ವಿಟ್ಲ: ಕುಡುಕನೊಬ್ಬ ಮೆನಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ವಿಟ್ಲದ ಚಂದಳಿಕೆಯಲ್ಲಿ ನಡೆದಿದೆ.ವೃತ್ತಿಯಲ್ಲಿ ರಿಕ್ಷಾ ಡ್ರೈವರ್ ಆಗಿರುವ ಗಣೇಶ್ ಶೆಟ್ಟಿ ಎಂಬಾತ ನವೀನ್ ಎಂಬವರ ಮನೆಯ ಮುಂದೆ ಕುಡಿದು ಗಲಾಟೆ ಮಾಡುತ್ತಿದ್ದ. ಬಳಿಕ ನೇರವಾಗಿ ನವೀನ್ ಅವರ ಮನೆಗೆ ನುಗ್ಗಿದ್ದಾನೆ. ಈ ವೇಳೆ ನವೀನ್ ಅವರ ಪತ್ನಿ ಹಾಗೂ ಮಕ್ಕಳು ಮನೆಯಲ್ಲಿದ್ದರು. ಹೀಗೆ ನುಗ್ಗಿದಾತ ಚಾಕುವಿನಿಂದ ನವೀನ್ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಕೂಡಲೇ ನವೀನ್ ಅವರಿಗೆ ಪತ್ನಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನವೀನ್ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆತನನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.