Wednesday, June 24, 2026
Homeಕರಾವಳಿಬಂಟ್ವಾಳ : ಹಿಂದೂ ಮುಖಂಡನಿಗೆ ಸ್ನೇಹಿತನಿಂದಲೇ ಚೂರಿ ಇರಿತ

ಬಂಟ್ವಾಳ : ಹಿಂದೂ ಮುಖಂಡನಿಗೆ ಸ್ನೇಹಿತನಿಂದಲೇ ಚೂರಿ ಇರಿತ

- Advertisement -
- Advertisement -

ಬಂಟ್ವಾಳ : ಹಿಂದೂ ಮುಖಂಡನಿಗೆ ಸ್ನೇಹಿತನೇ ಚೂರಿಯಿಂದ ಇರಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹಿಂದೂ ಮುಖಂಡ, ಉದ್ಯಮಿ ಪುಷ್ಪರಾಜ್ ಅವರಿಗೆ ಅವರ ಸ್ನೇಹಿತ ರವಿ ಎಂಬಾತ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಷ್ಪರಾಜ್ ತನ್ನ ಸ್ನೇಹಿತ ರವಿ ಜೊತೆ ರಿಕ್ಷಾದಲ್ಲಿ ತೆರಳುತ್ತಿದ್ದಾಗ ರವಿ ಚೂರಿಯಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ .. ಚೂರಿ ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಚೂರಿ ಇರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಪುಷ್ಪರಾಜ್  ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರುಗಳೊಂದಿಗೆ ಮಾಹಿತಿ ಪಡೆದರು.ಬಂಟ್ವಾಳ ನಗರ ಠಾಣೆ ಪೋಲೀಸರು ಸ್ಥಳಕ್ಕೆ ‌ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!