Friday, June 5, 2026
Homeಕರಾವಳಿಬೆಳ್ತಂಗಡಿ: ಜಾತಿ ನಿಂದನೆ ಮಾಡಿ ಯುವಕನ ಮೇಲೆ ಹಲ್ಲೆ

ಬೆಳ್ತಂಗಡಿ: ಜಾತಿ ನಿಂದನೆ ಮಾಡಿ ಯುವಕನ ಮೇಲೆ ಹಲ್ಲೆ

- Advertisement -
- Advertisement -

ಬೆಳ್ತಂಗಡಿ: ಜಾತಿ ನಿಂದನೆ ಮಾಡಿ ಯುವಕನ ಮೇಲೆ ಹಲ್ಲೆ  ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ನಡೆದಿದೆ. ಅಶ್ವಥ್  (21) ಹಲ್ಲೆಗೊಳಗಾದ ಯುವಕ.

ಅಶ್ವಥ್  ಜೂನ್ 2 ರಂದು ಬೆಳ್ತಂಗಡಿ  ತಾಲೂಕು  ಉಜಿರೆ ಗ್ರಾಮದ  ಮೇಲಿನ ಮಚಾರು ಎಂಬಲ್ಲಿರುವಾಗ ಕರುಣಾಕರ  ಗೌಡ,  ನಿತಿನ್ ಮತ್ತು  ಹಾಗೂ ಇನ್ನೊಬ್ಬ ವ್ಯಕ್ತಿ ಬಂದಿದ್ದಾರೆ. ಅವರಲ್ಲಿ  ಕರುಣಾಕರ  ಗೌಡ ಎಂಬವರು  ಅಶ್ವಥ್ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೇ  ನಿತಿನ್ ಎಂಬವರೊಂದಿಗೆ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಅಶ್ವತ್ಥ್ ಅವರು  ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ದಲಿತ ದೌರ್ಜನ್ಯ ಅಡಿಯಲ್ಲಿ(ಅಟ್ರಾಸಿಟಿ) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಗಾಯಗೊಂಡ ಅಶ್ವತ್ಥ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!