Saturday, May 4, 2024
Homeತಾಜಾ ಸುದ್ದಿರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಮತ್ತೊಂದು ಜೆಎನ್‌ಯುನತ್ತ ಸಾಗುತ್ತಿದೆಯಾ ಕಲ್ಬುರ್ಗಿ ಕೇಂದ್ರೀಯ ವಿವಿ?

ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಮತ್ತೊಂದು ಜೆಎನ್‌ಯುನತ್ತ ಸಾಗುತ್ತಿದೆಯಾ ಕಲ್ಬುರ್ಗಿ ಕೇಂದ್ರೀಯ ವಿವಿ?

spot_img
- Advertisement -
- Advertisement -

ಕಲಬುರಗಿ :  ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯ ಕನಸ್ಸಿನೊಂದಿಗೆ ಹುಟ್ಟಿಕೊಂಡ ವಿಶ್ವ ವಿದ್ಯಾಲಯ, ಮತ್ತೊಂದು ಜೆಎನ್ ಯು ದಿಕ್ಕಿನಲ್ಲಿ ಸಾಗುತ್ತಿದೆ. ರಾಮನವಮಿ ಆಚರಣೆ ಮಾಡಿದ ವಿದ್ಯಾರ್ಥಿಗಳ ಮೇಲೆ ವಿವಿಯ ಇನ್ನೊಂದು ವಿದ್ಯಾರ್ಥಿಗಳ ತಂಡ ದಾಳಿ ನಡೆಸಿದ್ದೇ ಸಂಘರ್ಷದ ವಾತಾವಣರ ನಿರ್ಮಾಣಕ್ಕೆ ಕಾರಣವಾಗಿದೆ.

ವಿವಿಯ ಆವರಣದಲ್ಲಿ ಒಂದು ಪುಟ್ಟ ಲಕ್ಷ್ಮಿ ಗುಡಿ ಇದೆ. ಈ ಗುಡಿಯಲ್ಲಿ ನಿನ್ನೆ ಕೆಲ ವಿದ್ಯಾರ್ಥಿಗಳು ಶ್ರೀರಾಮ ನವಮಿ ಆಚರಿಸಿದ್ದಾರೆ. ಈ ಆಚರಣೆ ಮುಗಿಯುತ್ತಿದ್ದಂತೆಯೇ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಎಬಿವಿಪಿಯ ಇಬ್ಬರು ಕಾರ್ಯಕರ್ತರನ್ನು ಅಡ್ಡಗಟ್ಟಿ ಹಲ್ಲೆಗೈದಿದ್ದಾರೆ‌. ಕಲ್ಲು ಮತ್ತು ಬ್ಲೇಡ್‌ ನಿಂದ ಹಲ್ಲೆಗೈದ ಪರಿಣಾಮ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಕಲಬುರಗಿಯ ವಿಶ್ವನಾಥ ಮತ್ತು ರಾಜಸ್ಥಾನ ಮೂಲದ ನರೇಂದ್ರಕುಮಾರ ಎನ್ನುವವರಿಗೆ ಗಾಯಗಳಾಗಿದ್ದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ಎಬಿವಿಪಿಯ ಸಕ್ರೀಯ ಕಾರ್ಯಕರ್ತರು. ವಿವಿಯಲ್ಲಿ ಎಬಿವಿಪಿ ಬೆಳೆಸುತ್ತಿರುವುದನ್ನು ಸಹಿಸದೇ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ ಗಾಯಾಳು ವಿಶ್ವನಾಥ್.‌ ಹಲ್ಲೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ವಿವಿಯ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು.

ಇತ್ತ ದಲಿತ ಸೇನೆ ಕಾರ್ಯಕರ್ತರೂ ಸಹ ಇದಕ್ಕೆ ವಿರುದ್ಧವಾಗಿ ಪ್ರತಿಭಟನೆ ಶುರು ಮಾಡಿ ಗಮನ ಸೆಳೆದರು. ಪ್ರಕರಣದಲ್ಲಿ ದಲಿತ ಯುವಕ ರಾಹುಲ್ ಮೇಲೆ ಅನ್ಯಾಯವಾಗಿ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗೆ ಕಸಗುಡಿಸಲು ಎಬಿವಿಪಿ ಕಾರ್ಯಕರ್ತರೇ ಸೂಚಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಅವರೇ ಹಲ್ಲೆ ಮಾಡಿ ನಕಲಿ ವಿಡಿಯೋಗಳ ಮೂಲಕ ರಾಹುಲ್ ಮತ್ತು ಸಾದಿಕ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಿವಿಯಲ್ಲಿ ಕೋಮುವಾದಿಗಳು ಶಾಂತಿ ಕದಡುತ್ತಿದ್ದಾರೆ ಎಂದು ದಲಿತ ಸೇನೆ ಆರೋಪಿಸಿದೆ.

ಹಲ್ಲೆ ಮಾಡಿರುವ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಒಟ್ಟಿನಲ್ಲಿ ಕಲಬುರಗಿ ಕೇಂದ್ರೀಯ ವಿವಿ ಶಿಕ್ಷಣಕ್ಕಿಂತ ಇತರೇ ಕಾರಣದಿಂದಾಗಿಯೇ ಸುದ್ದಿಯಾಗುತ್ತಿದ್ದು, ಈಗಲೂ ವಿದ್ಯಾರ್ಥಿಗಳ ಸಂಘರ್ಷದಿಂದ ಗಮನ ಸೆಳೆದಿದೆ. ಅಷ್ಟೇ ಅಲ್ಲ ಒಂದೆಡೆ ಎಬಿವಿಪಿ, ಮತ್ತೊಂದೆಡೆ ದಲಿತ ಸೇನೆಯ ಪ್ರತಿಭಟನೆ ಇನ್ನೊಂದೆಡೆ ಎಡಪಂಥಿಯ ವಿಚಾರ ಥಾರೆಯ ವಿದ್ಯಾರ್ಥಿಗಳು ಹೀಗೆ ವಿವಿ ಮತ್ತೊಂದು ಜೆ.ಎನ್.ಯು ಆಗುವತ್ತ ದಾಪುಗಾಲು ಇಡುತ್ತಿರುವುದಂತೂ ಸುಳ್ಳಲ್ಲ.

- Advertisement -
spot_img

Latest News

error: Content is protected !!