Wednesday, June 3, 2026
Homeತಾಜಾ ಸುದ್ದಿದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ;...

ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ; ಮುತ್ತಪ್ಪರೈ ಎರಡನೇ ಪತ್ನಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬೆಂಗಳೂರು; ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುತ್ತಪ್ಪರೈ ಎರಡನೇ ಪತ್ನಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲ ದಾಖಲಾಗಿದೆ.

ರಿಕ್ಕಿ ರೈ ಕಾರು ಚಾಲಕ ಬಸವರಾಜ್ ನೀಡಿದ ದೂರಿನಂತೆ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಎರಡನೆ ಪತ್ನಿ ಅನುರಾಧ, ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ಬಿಲ್ಡರ್ ವೈದ್ಯನಾಥ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಶುಕ್ರವಾರ ಸಂಜೆ ಸದಾಶಿವನಗರದ ತಮ್ಮ ಮನೆಯಿಂದ ಬಿಡದಿ ಮನೆಗೆ ತೆರಳಿದ್ದರು.  ಬಿಡದಿಯಿಂದ ರಾತ್ರಿ ‌11 ಗಂಟೆಗೆ ವಾಪಸ್‌ ಸದಾಶಿವನಗರದ ಮನೆಗೆ ರಿಕ್ಕಿ ರೈ ಹಾಗೂ ಚಾಲಕ ಬಸವರಾಜ್ ಹೊರಟಿದ್ದಾರೆ. ಆದರೆ ಬಿಡದಿ ಮನೆಯಿಂದ ಬರುವಾಗ ಪರ್ಸ್ ಮರೆತು ಬಂದಿದ್ದ ರಿಕ್ಕಿ ರೈ ಬಿಡದಿ ರೈಲ್ವೆ ಟ್ರಾಕ್ ನಿಂದ ಮತ್ತೆ ಪರ್ಸ್ ತರಲು ವಾಪಸ್ ಬಿಡದಿ ಮನೆಗೆ ಹೋಗಿದ್ದಾರೆ.ಅಲ್ಲಿಂದ ವಾಪಸ್ ಹೋಗಿ ಒಂದು ಗಂಟೆ ಬಳಿಕ ಸದಾಶಿವನಗರದ ಮನೆಗೆ ಹೊರಟಿದ್ದಾರೆ. ಈ ವೇಳೆ ಮನೆ ಕಾಂಪೌಂಡ್ ನಿಂದ ಹೊರಬಂದಾಗ ಗುಂಡಿನ ದಾಳಿ ನಡೆದಿದೆ. ಫಾರ್ಚ್ಯೂನರ್ ಕಾರ್‌ ಮುಂದಿನ ಡೋರ್  ನಿಂದ ಬುಲೇಟ್ ಪಾಸ್ ಆಗಿ ಸೀಟ್ ಅನ್ನು ಸೀಳಿ ರಿಕ್ಕಿ ಮೂಗು ಮತ್ತು ಬುಜಕ್ಕೆ ಬುಲೆಟ್ ತಗುಲಿದೆ.  ಸದ್ಯ ಈ ಬಗ್ಗೆ ರಿಕ್ಕಿ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಐದು ತಂಡಗಳನ್ನ  ಮಾಡಿ ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!