Friday, June 5, 2026
Homeಕರಾವಳಿಪುತ್ತೂರು: ವಾಹನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ವ್ಯಕ್ತಿಯ ಮೇಲೆ ಹಲ್ಲೆ

ಪುತ್ತೂರು: ವಾಹನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ವ್ಯಕ್ತಿಯ ಮೇಲೆ ಹಲ್ಲೆ

- Advertisement -
- Advertisement -

ಪುತ್ತೂರು: ವಾಹನ ಅಡ್ಡಗಟ್ಟಿ ಅನ್ಯಕೋಮಿನ ಯುವಕರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಮುಕ್ವೆ ಎಂಬಲ್ಲಿ ನಡೆದಿದೆ.

ನರಿಮೊಗರಿನ ಎಲಿಕಾ ನಿವಾಸಿ ಮೋನಪ್ಪ ಗೌಡ ಎಂಬವರು ತರಕಾರಿ ತರಲು ಓಮ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಮುಕ್ವೆ ಜಂಕ್ಷನ್ ಬಳಿ ಆಕ್ಟಿವಾವನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿ ಕೆಲವು ಯುವಕರು ಮಾತನಾಡುತ್ತಿದ್ದರು ಎನ್ನಲಾಗಿದೆ. ಮೋನಪ್ಪ ಗೌಡ ಅವರು ಕಾರಿನ ಹಾರ್ನ್ ಹಾಕಿದ್ರೂ ಅವರು ಸೈಡ್ ಗೆ ತೆರಳದೇ ಇದ್ದಾಗ ಮೋನಪ್ಪ ಗೌಡ ಸೀದಾ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಆಗ ಮೋನಪ್ಪ ಗೌಡ ಅವರ ಕಾರನ್ನು ಅಡ್ಡಗಟ್ಟಿದ ಯುವಕರು ನಮ್ಮನ್ನು ಕಾರಿನ ಅಡಿಗೆ ಹಾಕ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ. ಹಲ್ಲೆ ನಡೆಸಿದ್ದಲ್ಲದೇ ಕಾರನ್ನು ಸುಟ್ಟ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋನಪ್ಪ ಗೌಡ ಅವರು ಆಸಿಫ್, ಸಿರಾಝ್, ಝೀಯಾಲ್ ಎಂಬವರ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!