Thursday, July 16, 2026
Homeಕರಾವಳಿವಿಟ್ಲ; ಜಾತ್ರೆಯಲ್ಲಿ ಅಂಗಡಿ ಇಟ್ಟಿದ್ದ ದಂಪತಿ ಮೇಲೆ ಹಲ್ಲೆ

ವಿಟ್ಲ; ಜಾತ್ರೆಯಲ್ಲಿ ಅಂಗಡಿ ಇಟ್ಟಿದ್ದ ದಂಪತಿ ಮೇಲೆ ಹಲ್ಲೆ

- Advertisement -
- Advertisement -

ವಿಟ್ಲ ಕಸಬ ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆ ಹಿನ್ನೆಲೆ  ಫ್ಯಾನ್ಸಿ ಅಂಗಡಿ ಹಾಕಿ ವ್ಯಾಪಾರ ಮಾಡಿಕೊಂಡಿದ್ದ ಸುರೇಶ್‌ ದಾಸ್‌ ಎಂಬವರಿಗೆ ಆರು ಮಂದಿ ಆರೋಪಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸುರೇಶ್‌ ದಾಸ್‌ ಎಂಬವರು ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ 12.30ಕ್ಕೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಗಣೇಶ್‌ ಕಡಂಬು ,ಮಂಜುನಾಥ ಮತ್ತು ಇತರ ನಾಲ್ಕು ಯುವಕರು ಬಂದು ಅಂಗಡಿ ಏಕೆ ಬಂದ್‌ ಮಾಡುತ್ತಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಮೈ ಮೇಲೆ ಕೈಹಾಕಿ ನಾನು ಯಾರೂ ಗೊತ್ತಾ ಎಂದು ಹೇಳಿ ನೆಲಕ್ಕೆ ಉರುಳಿಸಿ ಆರೋಪಿಗಳ ಪೈಕಿ ಮಂಜುನಾಥ ಸುರೇಶ್‌ ದಾಸ್‌ ಅವರಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದು, ಇತರ ಎರಡು ಜನರು ಹೊಟ್ಟೆಗೆ ಗುದ್ದಿರುವುದಾಗಿ ದೂರು ನೀಡಲಾಗಿದೆ.

ಇನ್ನು ಅಂಗಡಿಯಲ್ಲಿದ್ದ ಸುರೇಶ್‌ ದಾಸ್‌ ಅವರ ಪತ್ನಿ ರಾಜೀವಿ ಗಂಡನಿಗೆ ಹೊಡೆಯುವುದನ್ನು ತಡೆಯಲು ಬಂದಾಗ ಅವರಿಗೂ ಹಲ್ಲೆ ನಡೆಸಿದ್ದು ಗಲಾಟೆಯನ್ನು ನೋಡಿ ಅಲ್ಲಿದ್ದ ಜನರು ಬಂದಾಗ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!