ಬಂಟ್ವಾಳ : ಕಲ್ಲಡ್ಕ ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2,3,4 ರಂದು ವಿಧ್ವನ್ ಅನಂತ್ ಭಟ್ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ.
ರಾಷ್ಟ್ರ ರಾಜ್ಯ ಮಟ್ಟದ ಪ್ರಮುಖರು ಯಾಗದಲ್ಲಿ ಭಾಗವಹಿಸುವರು. ವಾರಾಣಾಸಿ ಕಾಶಿಮಠ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ ಯಾಗ ನಡೆಯಲಿದೆ. ಚಿತ್ರದುರ್ಗದ ಬಹ್ಮಾನಂದ ರೆಡ್ಡಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಸುಮಾರು ಐದು ಕೋಟಿ ರೂ. ವೆಚ್ಚ ಅಂದಾಜಿಸಿದೆ. 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ. ಕ್ಷೇತ್ರದಲ್ಲಿ ವೈದಿಕರಿಂದ ನಿತ್ಯ ರುದ್ರ ಪಾರಾಯಣ ಅನ್ನದಾನ ನಡೆಯುತ್ತಿದೆ.
ಇಂದಿನ ರುದ್ರಪಾರಾಯಣಕ್ಕೆ ಚಂದ್ರಶೇಖರ ಭಂಡಾರಿ ಅಂಮ್ಮುಜೆ ಗುತ್ತು ದೀಪ ಬೆಳಗಿ ಚಾಲನೆ ನೀಡಿದರು. ಕಾರ್ಯಧ್ಯಕ್ಷರಾದ ಜಗನ್ನಾಥ್ ಚೌಟ ಬದಿಗುಡ್ಡೆ ಮಾಣಿ,ಮಹಾಗಣಪತಿ ದೇವಸ್ಥಾನ ಬೊಂಡಲ ಇದರ ಆಡಳಿತ ಮಂಡಳಿ ಸದಸ್ಯರು, ಡಾ! ಮನೋಜ್ ಕುಮಾರ್ ಕಲ್ಲಡ್ಕ, ಮಣಿಕಂಠ ಭಜನಾ ಮಂಡಳಿ ಸದಸ್ಯರು ಕುದ್ರೆಬೆಟ್ಟು,ಶ್ರೀ ದುರ್ಗಾ ಯುವಕ ಮಂಡಲ ಕಕ್ಕೇಮಜಲು,ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಸೋಮವಾರ 7.4.2025ರಂದು ಬೆಳಗ್ಗೆ 7ಗಂಟೆಗೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯುವ ಅತಿಮಹಾರುದ್ರ ಯಾಗದ ಚಪ್ಪರ ಮುಹೂರ್ತ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.