Friday, June 5, 2026
Homeತಾಜಾ ಸುದ್ದಿಬಂಟ್ವಾಳ: ನಾಳೆ ಬಂಟರ ಸಂಘ ಮಾಣಿ ವಲಯದಿಂದ ಆಟಿಡೊಂಜಿ ಕೂಟ

ಬಂಟ್ವಾಳ: ನಾಳೆ ಬಂಟರ ಸಂಘ ಮಾಣಿ ವಲಯದಿಂದ ಆಟಿಡೊಂಜಿ ಕೂಟ

- Advertisement -
- Advertisement -

ಬಂಟ್ವಾಳ: ಬಂಟರ ಸಂಘ ಮಾಣಿ ವಲಯ ಇವರ ವತಿಯಿಂದ ನಾಳೆ(೨೪ ಜುಲೈ) ಆಟಿಡೊಂಜಿ ಕೂಟ ಮಾಣಿಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ನಡೆಯಲಿದೆ.

ತುಳುನಾಡಿನ ವೈವಿಧ್ಯಮಯ ಆಟಿ ತಿಂಗಳ ತಿಂಟಿ ತಿನಿಸುಗಳೊಂದಿಗೆ ಆಟಿಡೊಂಜಿ ಕೂಟ ಬೆಳಗ್ಗೆ ಒಂಭತ್ತು ಗಂಟೆಯಿಂದ ಪ್ರಾರಂಭವಾಗಲಿದೆ.

ಮಧ್ಯಾಹ್ನ ಎರಡು ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ರೇವತಿ ಕಲಾ ಸಂಘ ಸಿದ್ದಕಟ್ಟೆ ಇವರಿಂದ ತುಳು ಯಕ್ಷಗಾನ ತಾಳಮದ್ದಳೆ – ಶ್ರೀ ಕೃಷ್ಣ ಸಂಧಾನ ಮೇಳ ನಡೆಯಲಿದೆ.

ಹಾಗೇ ಹತ್ತನೇ ತರಗತಿ ಶೇ.೯೦ಹಾಗೂ ಪಿಯುಸಿಯಲ್ಲಿ ಶೇ. ೮೫ ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಾಣಿ ವಲಯದ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಗೌರವ ಕಾರ್ಯಕ್ರಮವೂ ಇರಲಿದೆ.

- Advertisement -

Latest News

error: Content is protected !!