Friday, June 5, 2026
Homeತಾಜಾ ಸುದ್ದಿಇದು ದೇಶವೇ ಬೆಚ್ಚಿ ಬೀಳುವ ರಣ ಭೀಕರ ಕೃತ್ಯ; ಪೊಲೀಸರು, ಮಾಧ್ಯಮಗಳ ಮುಂದೆಯೇ ಗ್ಯಾಂಗ್ ಸ್ಟಾರ್...

ಇದು ದೇಶವೇ ಬೆಚ್ಚಿ ಬೀಳುವ ರಣ ಭೀಕರ ಕೃತ್ಯ; ಪೊಲೀಸರು, ಮಾಧ್ಯಮಗಳ ಮುಂದೆಯೇ ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರನನ್ನು ಗುಂಡಿಕ್ಕಿ ಕೊಲೆ; ಕ್ಯಾಮೆರಾದಲ್ಲಿ ಸೆರೆಯಾಗಿದೆ ದುಷ್ಕರ್ಮಿಗಳ ಕೃತ್ಯ

- Advertisement -
- Advertisement -

ನವದೆಹಲಿ:ಉತ್ತರ ಪ್ರದೇಶದಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ.  ಮಾಜಿ ಸಂಸದ, ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಗುಂಡಿಕ್ಕಿ ಕೊಲೆ ಮಾಡಿರೋದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಲೆಗಾರರು ಕೃತ್ಯದ ಬಳಿಕ ಜೈಶ್ರೀಂ ರಾಂ ಘೋಷಣೆ ಕೂಗಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಯುಪಿಯ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಗೆಳೆಯ ಗುಲಾಂ ಮೃತಪಟ್ಟಿದ್ದರು.

ಅತೀಕ್ ಮಾಧ್ಯಮದವರೊಂದಿಗೆ ಮಾತನಾಡುವಾಗ, ಪೊಲೀಸರ ಎದುರಲ್ಲೇ ಜನರ ಗುಂಪಿನಿಂದ ಯಾರೋ ಅತಿಕ್ ಅಹ್ಮದ್ ಮತ್ತು ಅವರ ಸಹೋದರನ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದ್ದಾರೆ. ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವಾಗ ತಲೆಯ ಮೇಲೆ ಪಕ್ಕದಲ್ಲೇ ಗುಂಡು ಹಾರಿಸಿದ್ದಾರೆ. ಹಲವು ಬಾರಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗಿದೆ. ಶೂಟರ್‌ಗಳು ವರದಿಗಾರರ ವೇಷದಲ್ಲಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ಮಾಜಿ ಸಂಸದರಾಗಿದ್ದು, ಅಪಹರಣ ಪ್ರಕರಣದಲ್ಲಿ ಶಿಕ್ಷೆಗೊಳಗಾದವರು. 2005 ರಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಕೊಲೆ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಕೊಲೆಯಾದ ಶಾಸಕರ ವಕೀಲ ಉಮೇಶ್ ಪಾಲ್ ಅವರ ಹತ್ಯೆಯಲ್ಲೂ ಅವರು ಆರೋಪಿಯಾಗಿದ್ದರು.

- Advertisement -

Latest News

error: Content is protected !!