- Advertisement -
- Advertisement -
ಕಡಬ; ಬಿಯರ್ ಬಾಟಲಿಯಿಂದ ವ್ಯಕ್ತಿಗೆ ಹಲ್ಲೆ ಮಾಡಿರುವ ಘಟನೆ ಪಂಜದಲ್ಲಿ ನಡೆದಿದೆ.ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾರೊಂದರ ಬಳಿ ಪುರುಷೋತ್ತಮ ಎಂಬವರು ತಮ್ಮ ಸಂಬಂಧಿ ಜಗನ್ ಎಂಬವರಿಗೆ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ.ಪರಿಣಾಮ ಜಗನ್ ಅವರ ಕುತ್ತಿಗೆಗೆ ಗಾಯವಾಗಿದ್ದು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಬಾರ್ ಹೊರ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಇಬ್ಬರ ಮಧ್ಯೆ ಆಗಾಗ್ಗೆ ವಾಗ್ವಾದ, ಚರ್ಚೆಗಳು ನಡೆಯುತ್ತಿತ್ತು ಎನ್ನಲಾಗಿದೆ. ಗುರುವಾರ ಸಾಯಂಕಾಲವೂ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಹಲ್ಲೆಯ ಹಂತಕ್ಕೆ ಹೋಗಿದೆ. ಅಲ್ಲೇ ಸಿಕ್ಕ ಬಿಯರ್ ಬಾಟಲಿಯಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
- Advertisement -