- Advertisement -
- Advertisement -
ಕಾಸರಗೋಡು; ಬುರ್ಖಾ ಧರಿಸಿದ ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಯರ ಪಕ್ಕ ಕುಳಿತಿದ್ದವನಿಗೆ ಸಾರ್ವಜನಿಕರು ಬಿಸಿ ಬಿಸಿ ಕಜ್ಜಾಯ ಕೊಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ.
ಓರಿಸ್ಸಾ ಮೂಲದ ಯುವಕ ಮುಸ್ಲಿಂ ಯುವತಿಯರಂತೆ ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಮೀಪ ಕುಳಿತಿದ್ದ. ಈ ವೇಳೆ ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಯುವಕನ ಅಸಲಿಮುಖ ಬಯಲಾಗಿದೆ. ಈತನ ಚಲನವಲನದ ಬಗ್ಗೆ ಸಂಶಯ ಗೊಂಡ ಸ್ಥಳೀಯರು ಈತನ ಪಾದರಕ್ಷೆ ಹಾಗೂ ಪಾದವನ್ನು ವೀಕ್ಷಿಸಿ ಈತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ತನ್ನ ಗುರುತು ಹಚ್ಚಿದ್ದಾರೆಂದು ತೋರಿದ ಯುವಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದರೂ, ಅಷ್ಟರಲ್ಲಾಗಲೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
- Advertisement -