Tuesday, May 14, 2024
Homeಜ್ಯೋತಿಷ್ಯಈ ದಿನ ಗ್ರಹಣವಿದ್ದರೂ ಚಿಂತಿಸಬೇಕಿಲ್ಲ ಈ ರಾಶಿಯವರು

ಈ ದಿನ ಗ್ರಹಣವಿದ್ದರೂ ಚಿಂತಿಸಬೇಕಿಲ್ಲ ಈ ರಾಶಿಯವರು

spot_img
- Advertisement -
- Advertisement -

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಿಹಾರ ಶಾಸ್ತ್ರ
ನಂಬಿ ನಂಬದಿರಿ ಇದು ಸತ್ಯ. ನಿಮ್ಮ ನಂಬಿಕೆಗಳಿಗೆ ಇಲ್ಲಿ ಮೋಸವಿಲ್ಲ
ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರಬದ್ಧವಾಗಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡುತ್ತಾರೆ
ಗುರೂಜಿ ಹನುಮಂತರಾವ್
9686487402

ಮೇಷ
ಹಿತೈಷಿಗಳಿಂದ ಮಾನ ಹಾನಿ. ಆತ್ಮೀಯರ ಕಡೆಯಿಂದ ಧನ ಹಾನಿ ಪ್ರಸಂಗಗಳು ಎದುರಾಗಬಹುದು. ನೌಕರ ವೇತನದಲ್ಲಿ ಮುಂಭಡ್ತಿ ಭಾಗ್ಯ. ಆಪ್ತರ ವಿರಹ ದುಃಖ ಕಾಡಲಿದೆ. ನಿಂತುಹೋದ ಮದುವೆ ಕಾರ್ಯ ಹಿರಿಯರ ಮಾರ್ಗದರ್ಶನದಿಂದ ಪರಿಹಾರ ದೊರಕಲಿದೆ. ಸಂಗಾತಿಯ ನೆನಪು ಕಾಡುವುದು. ಮನೆ ಕಟ್ಟುವ ಚಿಂತನೆ. ಶಿಕ್ಷಕರ ವೃಂದದವರಿಗೆ ಬಡ್ತಿಯ ಭಾಗ್ಯ. ಶಿಕ್ಷಕರು ತಮ್ಮ ನೆಚ್ಚಿನ ಸ್ಥಳಕ್ಕೆ ವರ್ಗಾಂತರ ವಿಷಯದ ಬಗ್ಗೆ ಚಿಂತನೆ.
ವೃಷಭ
ಒಟ್ಟಾರೆ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯವೂ ಮತ್ತು ಕಷ್ಟಕರವೂ ಆಗಿರುತ್ತದೆ. ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ನಿಮ್ಮ ನಾಲಗೆ ನಿಮ್ಮ ಅಜ್ಜ ಅಜ್ಜಿಯಂದಿರ ಭಾವನೆಗಳಿಗೆ ಘಾಸಿ ಮಾಡುವುದರಿಂದ ನಿಮ್ಮ ಭಾಷೆಯನ್ನು ನಿಯಂತ್ರಿಸಿ.
ಮಿಥುನ
ಕುಟುಂಬ ಸಮೇತ ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಬ್ರಹ್ಮಚಾರಿಗಳಿಗೆ ಕಳತ್ರ ಯೋಗಕ್ಕೆ ಮಾತುಕತೆ ನಡೆಯಲಿದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಶ್ಲಾಘನೆಯಿಂದ ತುಸು ಸಂತಸವಾಗುತ್ತದೆ ಅದರ ಜೊತೆಗೆ ಹೆಚ್ಚಿನ ಜವಾಬ್ದಾರಿ ದೊರಕಲಿದೆ. ಸಮೀಪದ ದೇವದರ್ಶನ ಸಂಚಾರವಿದೆ. ಮಕ್ಕಳ ಆರೋಗ್ಯದ ಬಗ್ಗೆ ಚಿಂತನೆ. ದಂಪತಿಗಳಿಗೆ ಸಂತಾನ ಭಾಗ್ಯ. ಲೇವಾದೇವಿಗಾರರ ಉತ್ತಮ ಲಾಭವಂಶ. ಮಾತಾಪಿತೃ ಆರೋಗ್ಯದ ಕಡೆ ಗಮನವಿರಲಿ. ಮಾತಾಪಿತೃ ಸಲಹೆ ಮೇರೆಗೆ ಆಸ್ತಿ ವಿಚಾರ ರಾಜಿ ಮಾಡಿಕೊಳ್ಳುವಿರಿ.
ಕಟಕ
ನಿಮ್ಮ ಆಹಾರ ಕ್ರಮದ ಬಗ್ಗೆ, ವಿಶೇಷವಾಗಿ ಮೈಗ್ರೇನ್ ರೋಗಿಗಳು ಸೂಕ್ತ ಎಚ್ಚರ ತೆಗೆದುಕೊಳ್ಳಬೇಕು. ಅವರು ತಮ್ಮ ಊಟ ತಪ್ಪಿಸಿಕೊಂಡಲ್ಲಿ ಅದು ಅವರಿಗೆ ಅನಗತ್ಯ ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ.
ಸಿಂಹ
ಹೊಸ ವಾಹನ ಖರೀದಿ. ಆರೋಗ್ಯದಲ್ಲಿ ಚೇತರಿಕೆ . ಪತ್ನಿಯ ನಗು ಮುಖದಲ್ಲಿ ಮಂದಹಾಸ. ಯಾರಿಗೋ ಸಹಾಯ ಮಾಡಲು ಹೋಗಿ ಕೈಸುಟ್ಟುಕೊಳ್ಳುವ ಪ್ರಸಂಗ. ನಿಮ್ಮ ಮಾತಿನಲ್ಲಿ ಹಿಡಿತವಿರಲಿ. ಅತಿಯಾದ ಮಾತಿನಿಂದ ವಿರೋಧಗಳನ್ನು ಎದುರಿಸುವಿರಿ. ಮಿತ್ರರ ಸಹಾಯದಿಂದ ಕೈಗೊಂಡ ಕೆಲಸಕಾರ್ಯಗಳು ಸುಗಮವಾಗಲಿದೆ. ದೇವತಾರಾಧನೆ ಭಾಗ್ಯ. ಮನೆಮಂದಿಯೊಂದಿಗೆ ತಾಳ್ಮೆಯಿಂದ ಆಸ್ತಿಯ ವಿಚಾರ ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿ ವಿನಾಕಾರಣ ಅನುಮಾನ. ಪ್ರೇಮಿಗಳ ಮದುವೆ ವಿಳಂಬ.
ಕನ್ಯಾ
ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹೆಜ್ಜೆಯನ್ನು ಹಾಕುವ ಅಗತ್ಯವಿದೆ, ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು.


ತುಲಾ
ಸ್ನೇಹಿತರ ಮಾರ್ಗದರ್ಶನದಿಂದ ಆಕಸ್ಮಿಕ ಧನ ಹಾನಿ. ತಾಯಿಗೆ ಆರೋಗ್ಯ ಹಾನಿ. ಶಸ್ತ್ರಚಿಕಿತ್ಸೆ ಅಗತ್ಯತೆ ಕಂಡು ಬರಲಿದೆ. ದಾಯಾದಿಗಳಲ್ಲಿ ವಾದ, ವಿವಾದಗಳಿಂದ ತೊಂದರೆ. ಎದೆ ನೋವು ಉದರ ದೋಷ ಕಾಣಲಿದೆ. ಮಕ್ಕಳ ಮದುವೆ ಭಾಗ್ಯ. ಹೊಸ ಉದ್ಯಮ ಪ್ರಾರಂಭಿಸಬಹುದು. ಬಹುದಿನದ ಬೇಡಿಕೆ ಆಸ್ತಿ ಖರೀದಿಮಾಡಲಿದ್ದಾರೆ. ಪ್ರೇಮಿಗಳ ಪ್ರಣಯದಾಟ.
ವೃಶ್ಚಿಕ
ನಾನಾ ರೀತಿಯ ವ್ಯಾಪಾರ ಧನ ಸಂಗ್ರಹ. ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಸಂಚಾರ ಬೇಡ. ಕ್ರಯವಿಕ್ರಯಗಳಲ್ಲಿ ಲಾಭ. ಹಿರಿಯರಿಗೆ ದೇವತಾದರ್ಶನ ಭಾಗ್ಯವಿದೆ ಈ ಸದ್ಯಕ್ಕೆ ಬೇಡ. ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿ. ಹೆಂಡತಿಯ ಮಾರ್ಗದರ್ಶನದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ವಸ್ತ್ರಾಭರಣಗಳು ಖರೀದಿಸುವ ಚಿಂತನೆ. ಮಕ್ಕಳ ಮದುವೆ ಸಿದ್ಧತೆ.
ಧನು
ಧರ್ಮಪತ್ನಿಯ ಸಹಕಾರದಿಂದ ಆಸ್ತಿ ಖರೀದಿ ಆಗಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ವೃತ್ತಿ ಬದಲಾಗುವ ಸಂಭವವಿದೆ. ಕಾಂಟ್ರಾಕ್ಟ್ದಾರರಿಗೆ ವ್ಯಾಪಾರದಲ್ಲಿ ಅಭಿವೃದ್ಧಿಯು ತೋರಿ ಬರಲಿದೆ. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುವವರು ಪೂರ್ವ ತಯಾರಿ ಮಾಡಿಕೊಳ್ಳಿ. ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಲ್ಲಿಯೇ ಮುಂದುವರೆಯಿರಿ. ದುಷ್ಟ ಜನರ ಸಹವಾಸ ದೋಷದಿಂದ ದೂರ ಇರಿ. ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ಬೇಡ. ನಿಮ್ಮ ಮಧ್ಯಸ್ಥಿಕೆಯಿಂದ ಒಂದು ಹೆಣ್ಣು ಮಕ್ಕಳ ಮದುವೆ ಸಾಧ್ಯತೆ.
ಮಕರ
ಖರ್ಚುವೆಚ್ಚಗಳು ಹೆಚ್ಚಿದರೂ ಧನಾಗಮನಕ್ಕೆ ಕೊರತೆ ಇರದು. ನಿಮ್ಮ ವೃತ್ತಿಯಲ್ಲಿ ನಿಮ್ಮ ಚಿಂತನೆಗಳಿಗೆ ಪ್ರಾಧನ್ಯತೆ ಸಿಗಲಿದೆ. ಚಿಂತನೆಗಳು ಕಾರ್ಯಗತವಾಗಲಿವೆ. ನಿರುದ್ಯೋಗಿಗಳಿಗೆ ಸ್ನೇಹಿತರ ಮುಖಾಂತರ ಉದ್ಯೋಗ ಲಾಭವಿದೆ. ದಂಪತಿಗಳಿಗೆ ಸಿಹಿ ಸುದ್ಧಿ. ಇಂದು ಹೊಸ ಸದಸ್ಯ ಸೇರ್ಪಡೆಯಾಗಲಿದ್ದಾರೆ. ಕುಟುಂಬ ಕಲಹಗಳಿಂದ ಮನಸ್ತಾಪ. ಬೇರೆಯವರ ಅನಾವಶ್ಯಕವಾಗಿ ನಿಮ್ಮ ಕುಟುಂಬದಲ್ಲಿ ಹುಳಿ ಹಿಂಡುವ ಸಾಧ್ಯತೆ. ಉದ್ಯೋಗದಲ್ಲಿ ಏರಿಳಿತಗಳು ಸಂಭವ.
ಕುಂಭ
ನೆರೆಹೊರೆಯವರೊಂದಿಗೆ ಜಮೀನು ವಿಚಾರಕ್ಕಾಗಿ ಜಗಳ. ಪಿತ್ರಾರ್ಜಿತ ಆಸ್ತಿ ವಿಭಜನೆಗಾಗಿ ಕಾರಣರಾಗದಿರಿ. ಆರೋಗ್ಯದಲ್ಲಿ ವಾತ, ಪಿತ್ತ ಪ್ರಕೋಪ ತೋರಿ ಬರಲಿದೆ. ಮಕ್ಕಳ ಮದುವೆ ಬಂಧುಗಳ ಮಧ್ಯಸ್ಥಿಕೆಯೊಂದಿಗೆ ಮುಕ್ತಾಯ ಕಾಣಲಿದೆ. ವ್ಯಾಪಾರದ ಏಳಿಗೆಗೆ ಹೊಸಮಾರ್ಗ ಹುಡುಕುವಿರಿ. ನಿಮ್ಮ ವೈಯಕ್ತಿಕ ವಿಚಾರ ಪ್ರಸ್ತಾಪ ಬೇಡ. ಪ್ರೀತಿ ಪ್ರೇಮ ವಿರಹ ಕಾಡಲಿದೆ. ಮದುವೆಗೆ ವಿರೋಧ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆ ಸಂಭವ.
ಮೀನ
ಗೃಹ ಬಳಕೆಯ ಸಾಮಗ್ರಿಗಳ ಖರೀದಿ. ವ್ಯಾಪಾರ, ವ್ಯವಹಾರಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ. ಹೊಸ ವಾಹನ ಖರೀದಿ. ಶುಭಕಾರ್ಯಗಳಿಗೆ ಇದು ಸಕಾಲ. ಮಕ್ಕಳ ಮದುವೆ ಯಶಸ್ಸುಗಳಿಸುವಿರಿ. ವಿಚ್ಛೇದನ ಪಡೆದ ಮಗಳ ಮದುವೆ ಸಂಭವ. ದೂರದ ಪ್ರಯಾಣ ಬೇಡ. ಗರ್ಭಧರಿಸಿದ ಹೆಣ್ಣುಮಕ್ಕಳು ಜಾಗ್ರತೆವಹಿಸಿ. ಸಮಾಧಾನದಿಂದ ಕೆಲಸಕಾರ್ಯ ಮಾಡಿಕೊಳ್ಳಿ. ಮನೆ ಅಕ್ಕಪಕ್ಕ ಜನರಿಂದ ಕಿರಿಕಿರಿ

- Advertisement -
spot_img

Latest News

error: Content is protected !!