Friday, April 26, 2024
Homeತಾಜಾ ಸುದ್ದಿಅಶ್ವಿನಿ ಪುನೀತ್ ರಾಜ್‌ಕುಮಾರ್ ಗೆ ಮತ್ತೊಂದು ಆಘಾತ: ಅಪ್ಪು ಅಗಲಿಕೆಯ ನೋವಲ್ಲೇ ಬಹುದೊಡ್ಡ ಶಾಕ್

ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೆ ಮತ್ತೊಂದು ಆಘಾತ: ಅಪ್ಪು ಅಗಲಿಕೆಯ ನೋವಲ್ಲೇ ಬಹುದೊಡ್ಡ ಶಾಕ್

spot_img
- Advertisement -
- Advertisement -

ಬೆಂಗಳೂರು; ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಲ್ಲಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ.

ಅಶ್ವಿನಿ  ಅವರ ತಂದೆ ಭಾಗಮನೆ ರೇವನಾಥ್​ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.  ಭಾಗಮನೆ ರೇವನಾಥ್​ ಅವರಿಗೆ 78 ವರ್ಷ ವಯಸ್ಸಾಗಿತ್ತು. 20 ವರ್ಷಗಳ ಹಿಂದೆ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಎನ್​ಹೆಚ್​ಎಐ ಮುಖ್ಯ ಇಂಜಿನಿಯರ್​ ಆಗಿ ರೇವನಾಥ್​ ಕೆಲಸ ಮಾಡಿದ್ದರು. ಪುನೀತ್​ ರಾಜ್​ಕುಮಾರ್​ ನಿಧನದ ನಂತರ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದ್ದಾರೆ.

- Advertisement -
spot_img

Latest News

error: Content is protected !!