Sunday, April 28, 2024
Homeಕರಾವಳಿಪುತ್ತೂರಿನಲ್ಲಿ "ಕೈ" ಯನ್ನು ಎತ್ತಿದ ಮತದಾರರು; ಭಾರೀ ಪೈಪೋಟಿ ನಡುವೆ ಅಶೋಕ್ ಕುಮಾರ್ ರೈಗೆ ಗೆಲುವು

ಪುತ್ತೂರಿನಲ್ಲಿ “ಕೈ” ಯನ್ನು ಎತ್ತಿದ ಮತದಾರರು; ಭಾರೀ ಪೈಪೋಟಿ ನಡುವೆ ಅಶೋಕ್ ಕುಮಾರ್ ರೈಗೆ ಗೆಲುವು

spot_img
- Advertisement -
- Advertisement -

ಪುತ್ತೂರು; ರಾಜ್ಯದಲ್ಲೇ ಗಮನ ಸೆಳೆದ ಪುತ್ತೂರು ವಿಧಾನಸಭಾ ಕ್ಷೇತದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿ ಭದ್ರಕೋಟೆ ಎಂದು ಗುರುತಿಸಿಕೊಂಡಿದ್ದ ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿದೆ. ಅಶೋಕ್ ರೈ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಹಾಗೂ ಅಶೋಕ್ ಕುಮಾರ್ ರೈ ಮಧ್ಯೆ ಭಾರೀ ಪೈಪೋಟಿ ಇತ್ತು. ಕೊನೆಗೆ 3500 ಮತಗಳಿಂದ ಅಶೋಕ್ ರೈ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಮೂರನೇ ಸ್ಥಾನ ಗಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 61797 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 59124 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 34871 ಮತ ಪಡೆದಿದ್ದಾರೆ.

- Advertisement -
spot_img

Latest News

error: Content is protected !!